ಉಕ್ಕಿನ ಸೇತುವೆ, ಟನೆಲ್ ರೋಡ್ ಬೇಡ ಎನ್ನುವ ವಿರೋಧ ಪಕ್ಷಗಳು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಪರೋಕ್ಷವಾಗಿ ಉದ್ಯಮಿ ಮೋಹನದಾಸ್ ಪೈ ಅವರ ವಿರುದ್ಧ ವಾಗ್ದಾಳಿ ನಡೆಸಿ ಟ್ವೀಟ್ ಗಳ ಮೂಲಕ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹೊರಹಾಕುವವರಿಗೆ ಕೀ ಬೋರ್ಡ್ ವಾರಿಯರ್ಸ್ ಎಂದು ಟೀಕಿಸಿದರು.

ವಿಶ್ವದಲ್ಲಿ ಬೆಂಗಳೂರು ಕಳೆದ ಮೂರೂವರೆ ದಶಕಗಳಲ್ಲಿ ಸಿಲಿಕಾನ್ ವ್ಯಾಲಿಯಾಗಿ ಗುರುತಿಸಿಕೊಳ್ಳಲು ತಮ್ಮ ಸರ್ಕಾರದ ನೀತಿಗಳೂ ಕಾರಣವಾಗಿವೆ. ಒಂದು ವೇಳೆ ಐಟಿ-ಬಿಟಿ ಕ್ಷೇತ್ರ ಬೆಳೆಯುವ ಹಂತದಲ್ಲೇ ತಮ್ಮ ಸರ್ಕಾರ ತೆರಿಗೆ ಹೇರಿದ್ದರೆ ಬೆಂಗಳೂರು ಐಟಿಬಿಟಿ ಕ್ಷೇತ್ರ ಈ ಪರಿ ಬೆಳೆಯುವುದು ಸಾಧ್ಯವಾಗುತಿತ್ತೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

- Advertisement - 

ವಿರೋಧ ಪಕ್ಷದವರು ಉಕ್ಕಿನ ಸೇತುವೆ ಬೇಡ ಅನ್ನುತ್ತಾರೆ, ಟನೆಲ್ ರೋಡ್ ಬೇಡ ಅನ್ನುತ್ತಾರೆ, ವಿಶ್ವಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಏನು ಬೇಕು ಏನು ಬೇಡ ಅನ್ನೋದಾದರೂ ಅವರು ಹೇಳಲಿ ಎಂದು ಖರ್ಗೆ ಆಗ್ರಹ ಮಾಡಿದರು.

 

- Advertisement - 

Share This Article
error: Content is protected !!
";