ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಜನರಿಗೆ ವಿದ್ಯುತ್‌ದರ ಏರಿಕೆಯ ಭೂತ ಬೆನ್ನತ್ತಿರುವ ಸಮಯದಲ್ಲೇ ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಲೋಡ್‌ಶೆಡ್ಡಿಂಗ್‌ಗ್ಯಾರಂಟಿಯಾಗಿದೆ ಎಂದು ಜೆಡಿಎಸ್ ಭವಿಷ್ಯ ನುಡಿದಿದೆ.
ರಾಜ್ಯಾದ್ಯಂತ ನಾಳೆಯಿಂದ ಪಿಯುಸಿ ಪರೀಕ್ಷೆಗಳು ಹಾಗೂ ಕೆಲ ದಿನಗಳಲ್ಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಪ್ರಾರಂಭವಾಗಲಿದೆ. ಈ ವೇಳೆಯೇ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಿದ್ಯುತ್‌ಕಣ್ಣಾಮುಚ್ಚಾಲೆ ಶುರುವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಕಾಂಗ್ರೆಸ್‌ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಜೆಡಿಎಸ್ ಟೀಕಿಸಿದೆ.
ಈಗಾಗಲೇ ತುಮಕೂರು, ಹಾವೇರಿ, ಶಿವಮೊಗ್ಗ, ಹಾಸನ, ಬೆಂಗಳೂರು, ಮೈಸೂರು ಸೇರಿ ಹಲವು ಜಿಲ್ಲೆಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ.
ರಾಜ್ಯದಲ್ಲಿ ಬೇಡಿಕೆ ಪ್ರಸ್ತುತ 335 ದಶಲಕ್ಷ ಯೂನಿಟ್ ಇದ್ದು, ಮಾರ್ಚ್ ಅಂತ್ಯಕ್ಕೆ 355-360 ದಶಲಕ್ಷ ಯೂನಿಟ್ ಬೇಡಿಕೆ ತಲುಪಲಿದೆ. ಇಂಧನ ಇಲಾಖೆ ಕಮಿಷನ್‌ಆಸೆಗೆ ಕೋಟಿಗಟ್ಟಲೆ ಹಣಕೊಟ್ಟು ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸುತ್ತಿದೆ.
ವಿದ್ಯುತ್‌ಸರಬರಾಜು ಕಂಪನಿಗಳು ವಿವಿಧ ಮೂಲಗಳಿಂದ ವಿದ್ಯುತ್ ಪಡೆಯುತ್ತಿದ್ದರೂ ಅದನ್ನು ಪೂರೈಸಲು ಅಂತಾರಾಜ್ಯ ಪ್ರಸರಣ ಮಾರ್ಗಗಳಿಲ್ಲ. ಇದರಿಂದ ಗ್ರಾಹಕರಿಗೆ ಖರೀದಿ ಹೊರೆಯ ಜೊತೆಗೆ ಕತ್ತಲೆ ಬರೆಯೂ ಬೀಳುತ್ತಿದೆ. ಸಿದ್ದರಾಮಯ್ಯ ಸರ್ಕಾರ ನಾಡಿನ ಜನರಿಗೆ ದುಬಾರಿಯಾಗಿ ಪರಿಣಮಿಸಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.