ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನವ್ಯ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಅಕಾಡಮಿ ಹಾಗು ಚೆಸ್, ಯೋಗ, ಭರತನಾಟ್ಯ, ಸಂಗೀತ, ನೃತ್ಯ ತರಬೇತಿ ಕೇಂದ್ರ ವತಿಯಿಂದ ಮೊದಲನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಪ್ರತಿಭಾವಂತ ಮಕ್ಕಳಿಗೆ ಅಭಿನಂದನಾ ಕಾರ್ಯಕ್ರಮ ಸಮಾರಂಭವನ್ನು ಡಾ. ರಾಜಕುಮಾರ್ ಕಲಾಮಂದಿರದಲ್ಲಿ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಪoಜಿನಿ ಪಿ. ಸಿ.ವೆಂಕಟೇಶ ಮಾತನಾಡಿ ಈಗಿನ ಕಾಲಘಟ್ಟದಲ್ಲಿ ಮಕ್ಕಳು ಹೆಚ್ಚಾಗಿ ಮೊಬೈಲ್ ಬಳಸುವುದು ಹೆಚ್ಚಾಗಿದೆ, ಇದರಿಂದ ಮಕ್ಕಳ ಮೆದುಳಿನ ಮೇಲೆ ಮತ್ತು ಕಾಯಿಲೆಗಳಿಗೆ ತುತ್ತಾಗುವ ಸಂಭವ ಹೆಚ್ಚಿದೆ ಆದ್ದರಿಂದ ಮಕ್ಕಳ ಪೋಷಕರು ಅವರಿಗೆ ಮೊಬೈಲ್ ನಿಂದ ದೂರ ಇರಿಸುವುದು ಒಳ್ಳೆಯದು ಎಂದರು.ಹಾಗೂ ಮಕ್ಕಳನ್ನು ಹೆಚ್ಚಾಗಿ ಸಂಸ್ಕೃತಿ, ಡ್ಯಾನ್ಸ್ ಭರತನಾಟ್ಯ, ಯೋಗ, ಇತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದು ಮಕ್ಕಳನ್ನು ದುಷ್ಟ ಗಳಿಂದ ದೂರ ಇಡುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ನಂತರ ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ನಾಗರಾಜು ಮಾತನಾಡಿ ನಮ್ಮ ದೊಡ್ಡಬಳ್ಳಾಪುರದಲ್ಲಿ ಹಲವಾರು ಮಹನೀಯರನ್ನು ನಮ್ಮೂರು ಕೊಡುಗೆಯಾಗಿ ನೀಡಿದೆ.. ಸ್ವತಂತ್ರ ಹೋರಾಟಗಾರರು, ಕನ್ನಡಪರ ಹೋರಾಟಗಾರರ, ಕಲಾವಿದರು, ನಾಟಕಕಾರರು, ಕವಿಗಳು,ಸಾಹಿತಿ, ನೃತ್ಯ ಕಲಾವಿದರು,ಭರತನಾಟ್ಯ ಯೋಗ, ಕ್ರೀಡೆಯಲ್ಲಿ ಹೆಚ್ಚಿನ ಕೊಡುಗೆ ಇದೆ ಈ ಸಂದರ್ಭದಲ್ಲಿ ಡಾ. ರಾಜಕುಮಾರ್ ಅವರನ್ನು ನಾವು ಸ್ಮರಿಸಲೇ ಬೇಕಾಗುತ್ತದೆ. ಏಕೆಂದರೆ ಅವರು ಕಲೆಗೆ ಕೊಟ್ಟಂತಹ ಗೌರವ, ಅವರ ಆದರ್ಶಗಳು, ಮತ್ತು ಅವರ ಕೆಲವು ಸಿದ್ಧಾಂತಗಳು ಈಗಿನ ಮಕ್ಕಳು ಭವಿಷ್ಯದಲ್ಲಿ ಅಳವಡಿಸಿ ಕೊಂಡಿದ್ದಲ್ಲಿ ಉತ್ತಮ ಪ್ರಜೆಗಳಾಗುವುದರಲ್ಲಿ ಸಂಶಯವೇ ಇಲ್ಲ ಎಂದು ತಿಳಿಸಿದರು ಹಾಗೂ ನಮ್ಮ ದೊಡ್ಡಬಳ್ಳಾಪುರದ ಹೆಮ್ಮೆ ಅಂತರಾಷ್ಟ್ರೀಯ ಯೋಗ ಪಟುಗಳಾದ ಮಧುಸೂದನ್, ಮತ್ತು ಗಾನಶ್ರೀ ಅಶ್ವಥ್ ಇನ್ನು ಹಲವಾರು ಕ್ರೀಡಾಪಟುಗಳು ನಮ್ಮ ದೊಡ್ಡಬಳ್ಳಾಪುರ ಕ್ಕೆ ಮಾದರಿಯಾಗಿದ್ದಾರೆ ಅದರಂತೆ ಈ ಸಂಸ್ಥೆ ಇನ್ನೂ ಉನ್ನತ ಮಟ್ಟಕ್ಕೆ, ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಮನ್ನಣೆಯನ್ನು ಪಡೆಯಲಿ ಎಂದು ಶುಭ ಕೋರಿದರು.
ನಂತರ ಮಾತನಾಡಿದ ಡಾ. ಮಾದೇವಿ ಚೌದರಿ, ಮಾಸ್ಟರ್ ಮೆಮೊರಿ ಕೋಚ್ ನ್ಯುರೋ ಜಿಮ್ ತಜ್ಞರು, ಪ್ರಧಾನ ಕಾರ್ಯದರ್ಶಿ ಮತ್ತು ಅಂತರಾಷ್ಟ್ರೀಯ ತೀರ್ಪುಗಾರರು,ಇವರು ಮಾತನಾಡಿ ನಮ್ಮ ಯಾವುದೇ
ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಮೊದಲು ನಾವು ದೊಡ್ಡಬಳ್ಳಾಪುರ ಕ್ಕೆ ಆದ್ಯತೆಯನ್ನು ನೀಡುತ್ತೇವೆ ಹಾಗೂ ಸಂಸ್ಥೆಯ ಸಂಸ್ಥಾಪಕರಾದ ನವ್ಯ ಶ್ರೀ ಎಂ ಕೆ. ಉತ್ತಮ ಪ್ರತಿಭೆ ತಾನು ಬೆಳೆಯದೆ ತನ್ನ ಜೊತೆಯಲ್ಲಿ ಇರುವವರನ್ನು ಸಹ ಬೆಳೆಸುವುದು ಉತ್ತಮ ಹವ್ಯಾಸವನ್ನು ಹೊಂದಿರುವ ವ್ಯಕ್ತಿತ್ವ,, ಹಾಗೂ ಮಕ್ಕಳನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕಳಿಸುವುದು ಉತ್ತಮ ನಡೆಯಾಗಿದೆ ಎಂದು ಶುಭ ಕೋರಿದರು.
ಹಾಗೂ ಸಂಸ್ಥೆಯ ಅಂತರಾಷ್ಟ್ರೀಯ ಯೋಗ ಪ್ರಶಸ್ತಿ ಪುರಸ್ಕೃತರಾದ ಕೀರ್ತನ ಬಿ ಎಂ, ಪುನೀತ್ ಕೊಂಗಾಡಿ.ನ್, ರಾಧಾ ಸ್ವರೂಪ ಎಸ್, ಕೀರ್ತನ ಟಿಎಸ್ ಗೌರವಿಸಿ ಅಭಿನಂದಿಸಲಾಯಿತು ಹಾಗೂ ಕಾರ್ಯಕ್ರಮ ನೀಡಿದ ಎಲ್ಲಾ ಮಕ್ಕಳಿಗೂ ನೆನಪಿನ ಕಾಣಿಕೆ ಮತ್ತು ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನಾಗರಾಜ್ ಎಚ್ ತಾಲ್ಲೂಕು ದೈಹಿಕ ಶಿಕ್ಷಣ ಗೋವಿಂದರಾಜು. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಅರುಣ್ ರಾಜ್ ಬಸವೇಶ್ವರ .ಕೆ.ಎಸ್, ದೈಹಿಕ ಶಿಕ್ಷಣ ನಿರ್ದೇಶಕರು, ಜಿ.ಎಫ್.ಜಿ.ಸಿ, . ಗಂಗಾಧರ್ ಬಿ. ವಾದಫೀರ್ .ಪಿ.ಡಿ ದೈಹಿಕ ಶಿಕ್ಷಣ ನಿರ್ದೇಶಕರು, ಆರ್.ಎಲ್.ಜೆ.ಐ.ಟಿ, ದೊಡ್ಡಬಳ್ಳಾಪುರ ಮಂಜುನಾಥ .ಯು.ಎಂ ನೃತ್ಯ ಕಲಾವಿದರು ಮತ್ತು ಶಿಕ್ಷಕರು. ಯು.ಎಂ ಮಂಜುನಾಥ್ ಕಲಾ ಅಕಾಡೆಮಿ, ಬಾಶೆಟ್ಟಿಹಳ್ಳಿ, ದೊಡ್ಡಬಳ್ಳಾಪುರ ಬಿ. ಚಂದ್ರಶೇಖರ್ ಪ್ರಧಾನ ಕಾರ್ಯದರ್ಶಿ, ದೊಡ್ಡಬಳ್ಳಾಪುರ ತಾ। ಕಲಾವಿದರ ಸಂಘ ಪ್ರಕಾಶ್. ದೈಹಿಕ ಶಿಕ್ಷಕರು,
ಚೆರಿ ಸುಬ್ಬು. ಡಿಜೆ ಡ್ಯಾನ್ಸ್ ಸ್ಟುಡಿಯೋ ಸಂಸ್ಥಾಪಕರು ಮತ್ತು ನೃತ್ಯ ಶಿಕ್ಷಕ. ಮಾನಸ ಎಚ್.ವಿ ಮುಖ್ಯಶಿಕ್ಷಕಿ, ಎಸ್.ಪಿ.ಟಿ. ಟ್ವಿಂಕಲ್ ಸ್ಟಾರ್ ಶಾಲೆ, ವೆಂಕಟೇಶ್ , ಪ್ರಧಾನ ಕಾರ್ಯದರ್ಶಿ, ಎಸ್.ಟಿ.ಆರ್.ಡಿ.ಪಿ.ಆರ್. ನೌಕರರ ಕ್ಷೇಮಾಭಿವೃದ್ಧಿ ಸಂಘ. ಶ್ರೀನಿವಾಸ್ ಪ್ರತ್ರಿಕೋದ್ಯಮಿ ಸ್ನೇಹಿತರು, ಯೋಗಾ ಪಟುಗಳು, ಕ್ರೀಡಾಪಟುಗಳು, ಸಂಗೀತ ಶಿಕ್ಷಕರು, ನೃತ್ಯ ಶಿಕ್ಷಕರು ಮತ್ತು ಕಲಾವಿದರು, ಹಿರಿಯ ಕಲಾವಿದರು ಹಾಗೂ ನವ್ಯ ಕಲ್ಬರಲ್ ಆಂಡ್ ಸ್ಪೋರ್ಟ್ಸ್ ಅಕಾಡೆಮಿ ಎಲ್ಲಾ ಸದಸ್ಯರು, ಪೋಷಕರು ಮತ್ತು ಮಕ್ಕಳು ಮತ್ತು ಯು.ಎಂ ಮಂಜುನಾಥ್ ಕಲಾ ಅಕಾಡೆಮಿಯ ಎಲ್ಲಾ ಸದಸ್ಯರು, ಪೋಷಕರು ಮತ್ತು ಮಕ್ಕಳು ವಿನಾಯಕ ಯೋಗಾ ಕೇಂದ್ರದ ಎಲ್ಲಾ ಸದಸ್ಯರು, ಪೋಷಕರು ಮತ್ತು ಮಕ್ಕಳು ಹಾಜರಿದ್ದರು.

