ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ:
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಿಕೆವಿ ಸರ್ಕಾರಿ ಪ್ರೌಢಶಾಲೆ ನಿಂಬಳಗೇರೆ ಗ್ರಾಮದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿಜ್ಞಾನಿಗಳೊಂದಿಗೆ ಸಂವಾದ ಮತ್ತು ವಸ್ತು ಪ್ರದರ್ಶನ ನಡೆಸಲಾಯಿತು. ಬೆಂಗಳೂರು ಇಸ್ರೋದ ಯುಆರ್ ರಾವ್ ಉಡಾವಣಾ ಕೇಂದ್ರದ ವಿಜ್ಞಾನಿಗಳು ಹಾಗೂ ಯೋಜನಾ ನಿರ್ದೇಶಕ ಜಯಸಿಂಹ.ಪಿ ಮಾತನಾಡಿ ಶಾಲಾ ಮಕ್ಕಳು ವಿಜ್ಞಾನಿಗಳಾಗಲು ಬಾಲ್ಯದಿಂದಲೇ ವಿಜ್ಞಾನದ ಮೂಲಕ ಹಾಕುವಂತಹ ಪ್ರಯೋಗಗಳ ಆಸಕ್ತಿ ತೋರಿಸಿ ಗುರಿ ಸಾಧನೆಯತ್ತ ತಮ್ಮ ವಿದ್ಯಾಭ್ಯಾಸ ಕೇಂದ್ರೀಕರಿಸಬೇಕು ಆಗ ವಿಜ್ಞಾನ ತಂತ್ರಜ್ಞಾನದಲ್ಲಿ ಹೊಸ ವಿಚಾರಗಳು ಬರುತ್ತವೆ ಎಂದು ತಿಳಿಸಿದರು.
ಇಂದು ನ್ಯಾನೋ ಟೆಕ್ನಾಲಜಿ ವೇಗ ಪಡೆಯುತ್ತಿದೆ. ಗಿಡ-ಮರ ನಾಶವಾಗಿ ಮುಂದೊಂದು ದಿನ ಭೂಮಿ ವಿಪರಿತ ಟೆಕ್ನಾಲಜಿಗಳಿಂದ ವಿಷವಾಗಿ ಜೀವಿ ಸಂಕುಲಗಳು ಹಾಗೂ ಭೂಮಿಯು ಸಹ ಇಲ್ಲವಾಗುತ್ತದೆ. ಆ ದಿನಗಳು ಬರು ವಷ್ಟರೊಳಗೆ ಮಾನವನಿಗೆ ಹಾಗೂ ಜೀವ ಸಂಕುಲಕ್ಕೆ ವಾಸಕ್ಕೆ ಯೋಗ್ಯವಾದ ಬೇರೆ ಮನೆ ಪತ್ತೆ ಹಚ್ಚಬೇಕಾಗಿದೆ ಎಂದು ವೇದಿಕೆ ಮೂಲಕ ಮಕ್ಕಳಿಗೆ ಅವರು ಜಾಗೃತಿ ಮಾತುಗಳನ್ನು ತಿಳಿಸಿದರು.
ಇನ್ನೊಮ್ಮೆ ಚಂದ್ರನ ಮೇಲೆ ಮಾನವರನ್ನು ಇಳಿಸಿ ವಾತಾವರಣ ಸೃಷ್ಟಿಸಿ ಅಲ್ಲಿನ ಖನಿಜ ವಾತಾವರಣ ಪರೀಕ್ಷೆಗೆ ಯೋಚನೆಗಳಾಗಿವೆ. ಹಾಗೆ ಈ ಸಂದರ್ಭದಲ್ಲಿ ವಿಶ್ವವೇ ತಿರುಗಿ ನೋಡುವಂತಹ ಹೆಸರು ವಿಜ್ಞಾನಿಗಳಿಂದ ಚಂದ್ರಯಾನ-3 ಯಶಸ್ಸು ಒಂದು ರೋಮಾಂಚನಕಾರಿ ಅನುಭವ ವಿಜ್ಞಾನಿಗಳಿಗೆ ಮಾತ್ರವಲ್ಲದೆ ದೇಶಕ್ಕೆ ವಿಶ್ವಕಪ್ ಗೆದ್ದಿದ್ದಕ್ಕಿಂತಲೂ ಹೆಚ್ಚಿನ ಸಂಭ್ರಮ ತಂದು ಕೊಟ್ಟಿತು ಎಂದು ಮಕ್ಕಳ ಸಮ್ಮುಖದಲ್ಲಿ ತಮ್ಮ ಸಂತೋಷವನ್ನು ಅವರು ಹಂಚಿಕೊಂಡರು. ಇದರಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ನಾವು ವಿಜ್ಞಾನಿಗಳಾಗಬೇಕು ಅನ್ನೋ ಭಾವನೆ ಹುಟ್ಟಿಕೊಂಡಿದೆ ಎಂದು ಜಯಸಿಂಹ ತಿಳಿಸಿದರು.
ಕೆ ವಿ ಕೆ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಪತ್ರೇಶ್ ಬಣಕಾರ್ ಮಾತನಾಡಿ ಇವರು ಮಕ್ಕಳಲ್ಲಿ ವಿಜ್ಞಾನದ ಕುರಿತು ಅತಿ ಹೆಚ್ಚು ಹೊಸದಾಗಿ ಮಕ್ಕಳಲ್ಲಿ ವಿಜ್ಞಾನದ ಅವಿಷ್ಕಾರಗಳು ಹಾಗೂ ಪ್ರತಿವರ್ಷ ಬೇರೆ ಬೇರೆ ವಿಜ್ಞಾನಿಗಳನ್ನು ತಮ್ಮ ಸರ್ಕಾರಿ ಶಾಲೆಗೆ ಮಕ್ಕಳ ಸಮ್ಮುಖದಲ್ಲಿ ಸಂವಾದ ಹಾಗೂ ವಿಚಾರಗಳನ್ನು ತಿಳಿಸಿಕೊಡಲು ಇಸ್ರೋ ವಿಜ್ಞಾನಿಗಳನ್ನೇ ಕರೆಸುವಂತಹ ಕೆಲಸ ಮಾಡುವುದರೊಂದಿಗೆ ತಮ್ಮ ಶಾಲೆಯ ವಿದ್ಯಾರ್ಥಿಗಳನ್ನು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ತಮ್ಮ ಶಾಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ರಾಷ್ಟ್ರ ಮಟ್ಟಕ್ಕೆ ವಿದ್ಯಾರ್ಥಿಗಳ ಮಾದರಿಗಳನ್ನು ಖ್ಯಾತಿಯನ್ನು ಗಳಿಸಿದರುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರಣಂ, ಮುಖ್ಯೋಪಾದ್ಯಾಯ ಫಕೀರಪ್ಪ, ಸಹ ಶಿಕ್ಷಕರು, ಗ್ರಾಮ ಪಂಚಾಯಿತಿ ಪಿಡಿಒ ಪ್ರಶಾಂತ್, ಗ್ರಾಮ ಪಂಚಾಯತಿ ಅಧ್ಯಕ್ಷ ಮಹಾಂತೇಶ್, ಸದಸ್ಯರು, ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರುಗಳು, ಊರಿನ ಮುಖಂಡರು ಹಾಗೂ ಸ್ವಾಮಿ ವಿವೇಕಾನಂದ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಎಂದು ಸಿ ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.