ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಕೆ ಎಸ್ ಆರ್ ಟಿ ಸಿ ಡಿಪೋ ರಸ್ತೆಯ ವಾಸಿ ದಿವಂಗತ ಜಿ.ತಿಪ್ಪಯ್ಯ ನಗರಸಭೆ ಆಪರೇಟರ್ ಇವರ ಪತ್ನಿ ತಿಪ್ಪಮ್ಮ(80) ಸೋಮವಾರ ನಿಧನರಾಗಿದ್ದಾರೆ.
ಮೃತರು ಮೂರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಚಿತ್ರದುರ್ಗ ನಗರದ ಕೆ.ಎಸ್.ಆರ್.ಟಿ.ಸಿ ಡಿಪೋ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಮೃತರ ಪಾರ್ಥಿವ ಶರೀರ ಇರಿಸಲಾಗಿದೆ.
ಚಿತ್ರದುರ್ಗದ ಯಂಗಮ್ಮನ ಕಟ್ಟೆ ರುದ್ರಭೂಮಿಯಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಮೃತರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ತಿಪ್ಪಮ್ಮ ಇವರ ಮಗ ಟಿ. ನಾಗಭೂಷಣ್ ಪತ್ರಿಕೆಗೆ ತಿಳಿದಿದ್ದಾರೆ.