ಮದುವೆ ಮನೆಯಲ್ಲಿ ಮೊಳಗಿದ ಪುಸ್ತಕಾಭಿಮಾನ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ಸಾಮಾನ್ಯವಾಗಿ ಮದುವೆ ಮನೆ ಎಂದರೆ ವಧುವರರಿಗೆ ಹರಸಿ ಹಾರೈಸಲು ಬಂದ ಬಂಧುಗಳಿಗೆ ಉಟೋಪಾಚಾರದ ಜೊತೆ ತಾಂಬೂಲದೊಂದಿಗೆ ಉಡುಗೊರೆ ನೀಡುವುದು ಸಾಮಾನ್ಯ ಆದರೆ ಇಲ್ಲೊಬ್ಬ ಪುಸ್ತಕ ಪ್ರೇಮಿ ಗ್ರಂಥಪಾಲಕರೊಬ್ಬರು ತನ್ನ ಮಗಳ ಮದುವೆಗೆ ಬಂದ  ಎಲ್ಲಾ ಬಂಧುಗಳಿಗೆ ಪುಸ್ತಕ ವಿತರಿಸುವ ಮೂಲಕ ಪುಸ್ತಕಭಿಮಾನವನ್ನ ವ್ಯಕ್ತಪಡಿಸಿ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದಾರೆ.

 ತಾಲೂಕಿನ ಹೆಬ್ಬೂರು ಹೋಬಳಿಯ ಸಿರಿವರ ಗ್ರಾಮದ ಶಿವಮೂರ್ತಿ ಎಂಬುವವರು  ಆದೇ ಸಿರಿವರ ಗ್ರಾಮದ ಗ್ರಾಮ ಪಂಚಾಯ್ತಿಯ  ಅರಿವು ಕೇಂದ್ರದಲ್ಲಿ ಗ್ರಂಥಪಾಲಕರಾಗಿ ಕಾರ್ಯ ನಿರ್ವಯಿಸುತ್ತಿದ್ದು ತನ್ನ ಮಗಳ ವಿವಾಹವು ಹೆಬ್ಬೂರಿನ ಗಾಯಿತ್ರಿ ಪ್ಯಾಲೆಸ್‌ನಲ್ಲಿ ನಡೆದಿದ್ದು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಬಂಧುಗಳಿಗೂ  ತಾವೇ ಸಂಪಾದಿಸಿದ ಅರಿವಿನೆಡೆಗೆ ಕೆರೆದೊಯ್ಯವ ವಿಶ್ವ ಜ್ಙಾನಿಗಳ ನುಡಿಮುತ್ತುಗಳು ಎಂಬ ಪುಸ್ತಕವನ್ನ  ನೆನಪಿನ ಕಾಣಿಕೆಯಾಗಿ ನೀಡಿದ್ದಾರೆ.

ವಿವಾಹ ಕಾರ್ಯಕ್ರಮದಲ್ಲಿ ಗಣ್ಯಾಥಿಗಣ್ಯರು ಸೇರಿದಂತೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದು ಪ್ರತಿಯೊಬ್ಬರಿಗೂ  ನೆನಪಿನ ಕಾಣಿಕೆಯಾಗಿ ಪುಸ್ತಕ ವಿತರಣೆಮಾಡಿದ್ದಾರೆ.

ಜ್ಙಾನವು ವ್ಯಕ್ತಿಯ ಮನಸ್ಸನ್ನ ವಿಶಾಲಗೊಳಿಸುವುದರ ಜೊತೆಗೆ  ದೊಡ್ಡ ಮನಸ್ಸಿನ ವ್ಯಕ್ತಿಯನ್ನಗಿ ನಿರ್ಮಾಣ ಮಾಡುತ್ತದೆ ಇಂತಹ ಪುಸ್ತಕವನ್ನ ಮದುವೆಗೆ ಬಂದ ಬಂಧುಗಳಿಗೆ ನೆನೆಪಿನ ಕಾಣಿಕೆಯಾಗಿ ನೀಡಿರುವ ಶಿವಮೂರ್ತಿಯವರು ಇತರರಿಗೆ ಮಾದರಿಯಾಗಲಿ ಇವರ ಈ ಪುಸ್ತಕಾಭಿಮಾನ ಓದುಗರಿಗೆ ಸ್ಪೂರ್ತಿಯಾಗಲಿ”. ಷ.ಬ್ರ.ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು, ಬಾಳೆಹೊನ್ನೂರು ಖಾಸಮಠ ಶ್ರೀ ಕ್ಷೇತ್ರ ಸಿದ್ದರಬೆಟ್ಟ .

ಇಂದಿನ ಕಾಲಮಾನದಲ್ಲಿ ವೈಭವಿಕರಣಕ್ಕೆ ಮಾರುಹೊಗುತ್ತಿರುವ ಜನತೆ ಈ ರೀತಿಯಾದ ವಿವಾಹ ಕಾರ್ಯಕ್ರಮದಲ್ಲಿ ತಮ್ಮ ಪ್ರತಿಷ್ಠೆಗೆ ಅದ್ದೂರಿ ಉಡುಗೊರೆಗಳನ್ನ ನೀಡುವುದು ಸಾಮಾನ್ಯ ಆದರೆ ಅವುಗಳ ಉಪಯೋಗ ಬೆಲೆಗೆ ಮೀಸಲು ಆದರೆ ಶಿವಮೂರ್ತಿಯವರು ವಿಶ್ವ ಜ್ಙಾನಿಗಳ ಆರ್ಥಪೂರ್ಣದ ನುಡಿಗಳನ್ನ ಪುಸ್ತಕದ ರೂಪದಲ್ಲಿ  ಬಿತ್ತರಿಸಿ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ ಇವರ ಈ ಕಾರ್ಯ ಓದುಗರಿಗೆ ಸ್ಪೂರ್ತಿಯಾಗಲಿ”.
ಶ್ರೀ ಹನುಮಂತನಾಥ ಮಹಾ ಸ್ವಾಮೀಜಿ, ಶ್ರೀ ಕ್ರೇತ್ರ ಎಲೆರಾಂಪುರ.

ಇಂದಿನ ಯುವ ಜನತೆ ಮೋಬೈಲ್ ಗೀಳಿಗೆ ಬಲಿಯಾಗುತ್ತಿದ್ದು  ಪುಸ್ತಕ ಓದುವಿನ ಮಹತ್ವವನ್ನು ಕಳೆದುಕೊಳ್ಳುತ್ತಿದ್ದಾರೆ ಇಂತಹ ಈ ಕಾಲಮಾನದಲ್ಲಿ  ವಿಶ್ವ ಜ್ಙಾನಿಗಳ ನುಡಿಮುತ್ತುಗಳನ್ನ ತಾವೇ ಬರೆದು ಮುದ್ರಿಸಿ ತನ್ನ ಮಗಳ ವಿವಾಹ ಕಾರ್ಯಕ್ರಮಕ್ಕೆ ಬಂದ ಪ್ರತಿಯೋಬ್ಬರಿಗೂ ನೆನಪಿನ ಕಾಣಿಕೆಯಾಗಿ ನೀಡಿರುವುದು ಹೊಸದೊಂದು ಕ್ಷಣಕ್ಕೆ ಸಾಕ್ಷಿಯಾಗಿದೆ ಇದು ಅಪರೂಪದಲ್ಲಿ ಅಪರೂಪವಾದ ವಿವಾಹ ಕಾರ್ಯಕ್ರಮವಾಗಿದೆ ಇದು ಓದುಗರಿಗೆ ಸ್ಪೂರ್ತಿಯಾಗಲಿ. ಹೆಚ್ ನಿಂಗಪ್ಪ, ಮಾಜಿ ಶಾಸಕರು.

 

- Advertisement -  - Advertisement - 
Share This Article
error: Content is protected !!
";