ಶೇ.800 ರಷ್ಟು ಸ್ಮಾರ್ಟ್ ಮೀಟರ್ ದರ ಏರಿಕೆಗೆ ಜೆಡಿಎಸ್ ತೀವ್ರ ಖಂಡನೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ಯಾರಂಟಿ ಮಂಕುಬೂದಿ ಎರಚಿ ಅಧಿಕಾರಕ್ಕೆ ಬಂದಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ
, ಆಡಳಿತ ನಡೆಸಲು ಹಣವಿಲ್ಲದೆ ಬೆಲೆ ಏರಿಕೆಯನ್ನೇ ಖಾಯಂ ಕೆಲಸ ಮಾಡಿಕೊಂಡಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.

ವಿದ್ಯುತ್ ದರ ಏರಿಕೆ ಶಾಕ್‌ಗೆ ಮೊದಲೇ ವಿದ್ಯುತ್‌ಸ್ಮಾರ್ಟ್‌ಮೀಟರ್‌ದರವನ್ನು ಶೇ.400% ರಿಂದ 800% ರಷ್ಟು ಹೆಚ್ಚಿಸಿ ರಾಜ್ಯದ ಜನರಿಗೆ ಹೈವೋಲ್ಟೇಜ್‌ಶಾಕ್‌ನೀಡಿದೆ ಎಂದು ಜೆಡಿಎಸ್ ಬೇಸರ ವ್ಯಕ್ತಪಡಿಸಿದೆ.

980 ರೂ. ಇದ್ದ ಸಾಮಾನ್ಯ ಮೀಟರ್‌ಇದೀಗ ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್‌ಗೆ ಜಿಎಸ್ಟಿ 4,998, 2450 ಸಿಗುತ್ತಿದ್ದ ಎಸ್ಪಿ-2 ಮೀಟರ್‌ಇದೀಗ ಸ್ಟಾರ್ಟ್ ಮೀಟರ್ ರೂಪದಲ್ಲಿ 8,880, 3,450 ಇದ್ದ ಎಸ್‌ಪಿ-3 (3ಫೇಸ್) ಮೀಟರ್‌ಗೆ 28,080 ಏರಿಕೆ ಮಾಡಲಾಗಿದೆ ಎಂದು ಜೆಡಿಎಸ್ ಕೆಂಡಕಾರಿದೆ.

ಸಾಮಾನ್ಯ ಮೀಟರ್ ಗಿಂತ ಹೊಸ ಮೀಟರ್ ದುಬಾರಿಯಾಗಿದ್ದು, ಸಿದ್ದರಾಮಯ್ಯ ಸರ್ಕಾರ ಏಪ್ರಿಲ್‌ರಿಂದ ಅನ್ವಯವಾಗುವಂತೆ ಹೊಸ ಶಾಕ್ ಕೊಟ್ಟಿದೆ.

ಬೆಲೆಗಳನ್ನು ಹೆಚ್ಚಿಸಿ ರಾಜ್ಯದ ಜನರಿಗೆ ಈ ಪರಿ ಶೋಷಣೆ ಮಾಡುತ್ತಿರುವುದು ಜನ ವಿರೋಧಿ ಆಡಳಿತ ಎಂದು ಜೆಡಿಎಸ್ ಅಸಮಾಧಾನ ವ್ಯಕ್ತಪಡಿಸಿದೆ.  

 

 

- Advertisement -  - Advertisement - 
Share This Article
error: Content is protected !!
";