ಇಂದು ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಕನ್ನಡ ನಾಡಿನ  ಜನತೆಗೆ  ಸರಿಯಾಗಿ ವಿತರಣೆ ಆಗುತ್ತಿಲ್ಲದಿರುವುದರ ವಿರುದ್ಧ ಜಿಲ್ಲಾ ಜೆಡಿಎಸ್ ಘಟಕದ ವತಿಯಿಂದ  ಮಾ. ೦೬ ರ ಗುರುವಾರ  ಬೆಳಗ್ಗೆ ೧೧ಗಂಟೆಗೆ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಜೆಡಿಎಸ್ ಘಟಕದ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ ತಿಳಿಸಿದ್ದಾರೆ.

ಚಿತ್ರದುರ್ಗ ನಗರದಲ್ಲಿನ ಓನಕೆ ಓಬವ್ವ ಸರ್ಕಲ್  ನಿಂದ  ಜಿಲ್ಲಾಧಿಕಾರಿಗಳ ಕಛೇರಿವರೆಗೆ ಹಮ್ಮಿ ಕೂಳ್ಳಲಾಗಿದೆ. ಪ್ರತಿಭಟನೆಯಲ್ಲಿ ಜಿಲ್ಲಾ ಜೆ ಡಿ ಎಸ್ ಘಟಕದ ಅಧ್ಯಕ್ಷ ಎಂ ಜಯಣ್ಣ,ರಾಜ್ಯ  ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್,   ಜಿಲ್ಲಾ ಕಾರ್ಯಧ್ಯಕ್ಷ ಜಿಬಿ ಶೇಖರ್, ಮಾಜಿ  ಜಿಲ್ಲಾ  ಅಧ್ಯಕ್ಷ ಡಿ.ಯಶೋಧರ  ಕಳೆದ ವಿಧಾನಸಭಾ ಪರಾಜಿತ ಅಭ್ಯರ್ಥಿಗಳಾದ ರವೀಂದ್ರಪ್ಪ, ರವೀಶ್ವೀರಭದ್ರಪ್ಪ ತಿಪ್ಪೇಸ್ವಾಮಿ, ತಾಲ್ಲೂಕ್ ಘಟಕದ ಅಧ್ಯಕ್ಷರಾದ ಸಣ್ಣತಿಮ್ಮಪ್ಪ  ಹನುಮಂತರಾಯಪ್ಪ, ಪಿ.ಟಿ.ತಿಪ್ಪೇಸ್ವಾಮಿ, ಕರಿಬಸಪ್ಪ, ಪರಮೇಶ್ವರಪ್ಪ  ಗಣೇಶಮೂರ್ತಿ, ವಿವಿಧ  ಘಟಕದ ಅಧ್ಯಕ್ಷರಾದ ಗೀತಮ್ಮ, ಲಲಿತಾಕೃಷ್ಣ ಮೂರ್ತಿ, ಪ್ರತಾಪ್ ಜೋಗಿ, ಅಬ್ಬು ಲಿಂಗರಾಜ್, ಮಠದಹಟ್ಟಿ ವೀರಣ್ಣ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸುವರು ಎಂದು ತಿಳಿಸಿದ್ದಾರೆ.

 

 

- Advertisement -  - Advertisement - 
Share This Article
error: Content is protected !!
";