ಸ್ತ್ರೀ ಕುಲವನ್ನು ಗೌರವಿಸುವ ಕೆಲಸ ಮಾಡಲಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ”
ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನದ ಉದ್ಘಾಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೆರವೇರಿ‌ಸಿದರು.

ಮಕ್ಕಳ ಲಾಲನೆ, ಪಾಲನೆಯಿಂದ ಆರಂಭವಾಗಿ ಪತ್ನಿ, ಗೃಹಿಣಿ, ಅಧಿಕಾರಿ, ಕ್ರೀಡಾಪಟು, ಗಗನಯಾತ್ರಿವರೆಗೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಛಾಪು ಮೂಡಿಸುತ್ತಿರುವ ಸ್ತ್ರೀ ಕುಲವನ್ನು ಗೌರವಿಸಬೇಕೆಂಬ ಸಂಕಲ್ಪ ಮಾಡಲಾಯಿತು ಎಂದು ಅವರು ತಿಳಿಸಿದರು.

- Advertisement - 

ಕನ್ನಡ ನಾಡು ಧೀರ ಮಹಿಳೆಯರಿಗೆ ಜನ್ಮ ಕೊಟ್ಟ ನಾಡು, ಅದು ಕೆಳದಿ ಚೆನ್ನಮ್ಮನಿರಬಹುದು, ಕಿತ್ತೂರು ರಾಣಿ ಚೆನ್ನಮ್ಮನಿರಬಹುದು, ರಾಣಿ ಅಬ್ಬಕ್ಕ ಇರಬಹುದು ಈ ಎಲ್ಲರೂ ಧೀರೋದ್ದಾತ ಮಹಿಳೆಯರಾದರೆ, ಕೇವಲ ಒಂದು ಗಂಟೆಯ ಒಳಗೆ ನೂರಾರು ಶತ್ರುಗಳನ್ನು ಸದೆಬಡಿದ ಒನಕೆ ಓಬವ್ವ ಅರಮನೆಯ ಸುಪ್ಪತ್ತಿಗೆಯಲ್ಲಿ ಇರಲಿಲ್ಲ,

- Advertisement - 

ರಾಣಿಯೂ ಆಗಿರಲಿಲ್ಲ, ರಾಜಕುಮಾರಿಯೂ ಆಗಿರಲಿಲ್ಲ ಸೇನಾಧಿಪತಿಯ ಪತ್ನಿಯೂ ಆಗಿರಲಿಲ್ಲ ಒಬ್ಬ ಸಾಮಾನ್ಯ ಸಿಪಾಯಿ ಹೆಂಡತಿ ಯಾಗಿದ್ದ ಒನಕೆ ಓಬವ್ವ ತನ್ನಲ್ಲಿದ್ದ ರಾಷ್ಟ್ರ ಅಭಿಮಾನದಿಂದ ನೂರಾರು ಶತ್ರುಗಳನ್ನು ಸದೆಬಡೆಯುವ ಎದೆಗಾರಿಗೆ ತೋರಿಸಿದ್ದಳು, ನಮ್ಮ ಹೆಣ್ಣು ಮಕ್ಕಳಲ್ಲಿ ಎಷ್ಟು ಶಕ್ತಿ ಇದೆ ಎನ್ನುವುದಕ್ಕೆ ಅವರು ಸದಾ ನಮಗೆ ಮಾದರಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ಲೇಹರ್ ಸಿಂಗ್, ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ಗೀತಾ ವಿವೇಕಾನಂದ, ಸೇರಿದಂತೆ ಮಹಿಳಾ ಮೋರ್ಚಾ ಪದಾಧಿಕಾರಿಗಳು, ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

 

Share This Article
error: Content is protected !!
";