ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಷ್ಟಕಾಲದಿ ಕೂಡ ನಿಂತವರ ನಾ ಮರೆಯಲಿ ಹ್ಯಾಂಗ? ಬೆಳಗಾವಿ ಸುವರ್ಣ ಸೌಧದಲ್ಲಿ ನನ್ನನ್ನು ಪೊಲೀಸರು ಅಕ್ರಮ ಬಂಧನಕ್ಕೆ ಒಳಪಡಿಸಿ ತೊಂದರೆ ಕೊಟ್ಟ ಸಂದರ್ಭದಲ್ಲಿ ನನ್ನ ಜೊತೆ ಅಚಲವಾಗಿ ನಿಂತವರು ನನ್ನ ಕರ್ನಾಟಕ ಬಿಜೆಪಿ ಪಕ್ಷದ ಕಾರ್ಯಕರ್ತ ಬಂಧುಗಳು ಹಾಗು ಕಾನೂನಾತ್ಮಕವಾಗಿ ಹೋರಾಟ ನಡೆಸಿದ ನನ್ನ ನ್ಯಾಯವಾದಿ ಗೆಳೆಯರು. ಅದರಲ್ಲೂ ಮುಖ್ಯವಾಗಿ ಬಿಜೆಪಿ ಕಾನೂನು ಪ್ರಕೋಷ್ಠದ ಪದಾಧಿಕಾರಿಗಳು ಮತ್ತು ಸದಸ್ಯರು ಎಂದು ವಿಪ ಸದಸ್ಯ ಸಿ.ಟಿ ರವಿ ತಿಳಿಸಿದ್ದಾರೆ.
ಅಂದು ಬೆಳಗಾವಿಯಲ್ಲಿ ನನ್ನ ಜೊತೆ ಸೈನ್ಯವಾಗಿ ನಿಂತ ಎಲ್ಲಾ ನ್ಯಾಯವಾದಿ ಬಂಧುಗಳನ್ನು ಇಂದು ಭೇಟಿಯಾಗಿ ಅವರಿಗೆ ಸಿಟಿ ರವಿ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯಸಭಾ ಸಂಸದರಾದ ಈರಣ್ಣ ಕಡಾಡಿ, ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ಮಾಜಿ ಶಾಸಕ ಸಂಜಯ್ ಪಾಟೀಲ್, ಅರವಿಂದ ಪಾಟೀಲ್, ನ್ಯಾಯವಾದಿಗಳಾದ ಎಂ ಬಿ ಜಿರಲಿ, ಕಾನೂನು ಪ್ರಕೋಷ್ಠದ ಪದಾಧಿಕಾರಿಗಳು, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

