ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
12ನೇ ಶತಮಾನದ ತತ್ವಜ್ಞಾನಿ ಭಕ್ತಿ ಚಳುವಳಿಯ ಕನ್ನಡದ ಕವಿ, ವಚನಕಾರ, ಸಮಾಜದ ಉನ್ನತ ವಿಚಾರಧಾರೆಗಳನ್ನು ಮಂಡಿಸಿದ ಮಹಾನುಭಾವ. ಹಿಂದೂ ಧರ್ಮದಲ್ಲಿ ನಡೆದ ಕ್ರಾಂತಿಯ ಇನ್ನೊಂದು ಹೆಸರೇ ಜಗಜ್ಯೋತಿ ಬಸವೇಶ್ವರರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ತಿಳಿಸಿದ್ದಾರೆ.
ಬೆಳಗಾವಿಯ ಖಾನಾಪುರದ ಮಹಾನಗರ ಪಾಲಿಕೆ ಆವರಣದಲ್ಲಿದ್ದ ಜಗಜ್ಯೋತಿ ಬಸವೇಶ್ವರ ಪ್ರತಿಮೆಗೆ, ದೇಶದಲ್ಲಿ ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿ, ಆದರ್ಶ ವ್ಯಕ್ತಿ. ತಮ್ಮ ತತ್ವ, ಸಿದ್ದಾಂತಗಳ ಮೂಲಕ ಯುವಜನೆತೆಗೆ ಸ್ಫೂರ್ತಿದಾಯಕವಾಗುವ ವ್ಯಕ್ತಿತ್ವ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ,
ಬ್ರಿಟಿಷರ ವಿರುದ್ಧ ರಣಚಂಡಿಯಂತೆ ಹೋರಾಡಿ ಕಿತ್ತೂರು ಸಂಸ್ಥಾನದ ಸ್ವಾಭಿಮಾನ, ನಾಡ ಪ್ರೇಮ, ಅಖಂಡ ಭಾರತ ದೇಶದ ಸ್ವಾತಂತ್ರ್ಯ ಪ್ರೇಮವನ್ನು ಹೋರಾಟದ ಮೂಲಕ ಸಾಬೀತು ಪಡಿಸಿದ ವೀರ ಮಹಿಳೆ ರಾಣಿ ಚೆನ್ನಮ್ಮ ಅವರ ಬೆಳಗಾವಿಯ ಕಾಕತಿಯಲ್ಲಿ ನಿರ್ಮಾಣವಾಗಿರುವ ಪುತ್ಥಳಿಗೆ, ಶೌರ್ಯ ಸಾಹಸ ಮತ್ತು ಸ್ವಾಭಿಮಾನದ ಕಿಚ್ಚಿಗೆ ಹೆಸರಾದ ಭಾರತೀಯರ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಸ್ಮರಿಸಿದರು.

