ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಧಿಕಾರ ಹಿಡಿಯುವ ದುರಾಲೋಚನೆಯಿಂದ ಅವೈಜ್ಞಾನಿಕ ಗ್ಯಾರಂಟಿಗಳನ್ನು ಘೋಷಿಸಿರುವ ಭಾರತೀಯ ಕಾಂಗ್ರೆಸ್ ಪಕ್ಷಕ್ಕೆ ಗ್ಯಾರಂಟಿ ಬಿಸಿ ತಟ್ಟಿದೆ ಎಂದು ಜೆಡಿಎಸ್ ತಿಳಿಸಿದೆ.
“ದೂರದ ಬೆಟ್ಟ ನುಣ್ಣಗೆ” ಎಂಬಂತೆ ಗ್ಯಾರಂಟಿಗಳು ಕಾಂಗ್ರೆಸ್‌ಸರ್ಕಾರಕ್ಕೇ ಮಾರಕವಾಗಿದೆ ಎಂದು ಜೆಡಿಎಸ್ ತಿಳಿಸಿದೆ.
ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್‌ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಬರಿದಾಗಿ ದಿವಾಳಿಯಾಗಿರುವ ಬೆನ್ನಲ್ಲೇ, ತೆಲಂಗಾಣದ ಕಾಂಗ್ರೆಸ್ ಸರ್ಕಾರಕ್ಕೂ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ವತಃ ಸಿಎಂ ರೇವಂತ್‌ರೆಡ್ಡಿ ಅಳಲು ತೋಡಿಕೊಂಡಿದ್ದಾರೆ.
ಕರ್ನಾಟಕದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು ಹಾಕುತ್ತಿಲ್ಲ, ಯೋಜನೆಗಳ ಉದ್ಘಾಟನೆಯಾಗುತ್ತಿಲ್ಲ. ಕರ್ನಾಟಕವನ್ನು ಈಗಾಗಲೇ ಸಾಲದಲ್ಲಿ ಮುಳುಗಿಸಿದ್ದಾರೆ “ಸಾಲರಾಮಯ್ಯ”. ಕಾಂಗ್ರೆಸ್ಸಿಗರೇ ಈಗಲಾದರೂ ಎಚ್ಚೆತ್ತುಕೊಳ್ಳಿ, ಗ್ಯಾರಂಟಿಗಳು ಸರ್ಕಾರವನ್ನು ದಿವಾಳಿ ಅಂಚಿಗೆ ತಳ್ಳುವ ಪೊಳ್ಳು ಯೋಜನೆಗಳಷ್ಟೇ ಎಂದು ಜೆಡಿಎಸ್ ದೂರಿದೆ.

