ಖರ್ಗೆ ಕುಟುಂಬದ ವಿರುದ್ಧ ಹರಿಹಾಯ್ದ ಜೆಡಿಎಸ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದಲಿತರ ಹೆಸರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಂಡು ಬಲಿತಿರುವ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಕುಟುಂಬದ ಲೂಟಿ ಮಾರ್ಗಗಳು ನೂರಾರು. ಜನರ ತೆರಿಗೆ ದುಡ್ಡಿನಲ್ಲಿ ಕರ್ನಾಟಕ ಕಾಂಗ್ರೆಸ್ ಜಾತ್ರೆ ಜೋರಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.
ಬೀದರ್‌ನ ಸಿದ್ದಾರ್ಥ ಜ್ಯೂನಿಯರ್ ಕಾಲೇಜಿನ (
KPES) ಕಾಂಪೌಂಡ್ ನಿರ್ಮಾಣಕ್ಕೆ 2025ರ ಮಾರ್ಚ್ 7ರಂದು ₹51.15 ಲಕ್ಷ ಹಣ ಮಂಜೂರು ಮಾಡಲಾಗಿದೆ. 

- Advertisement - 

ಹೈಕಮಾಂಡ್‌ಗುಲಾಮಗಿರಿಯನ್ನು ಚಾಚೂ ತಪ್ಪದೇ ಪಾಲಿಸುವ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಡೆತನದ ಸಂಸ್ಥೆಗೆ ಸರ್ಕಾರದ ಹಣವನ್ನು ದುಂದುವೆಚ್ಚ ಮಾಡಿದ್ದಾರೆ ಎಂದು ಜೆಡಿಎಸ್ ಆರೋಪಿಸಿದ್ದಾರೆ.

- Advertisement - 

ಖರ್ಗೆಯವರ ಕರ್ನಾಟಕ ಪೀಪಲ್ಸ್ ಎಜುಕೇಷನ್‌ಸೊಸೈಟಿ ವಿರುದ್ಧ ಹಣ ದುರ್ಬಳಕೆ ಸಂಬಂಧ ಲೋಕಾಯುಕ್ತದಲ್ಲಿ ವಿಚಾರಣೆ ನಡೆಯುತ್ತಿದೆ. ದೂರು ಇತ್ಯರ್ಥವಾಗದೇ ಇದ್ದರೂ ಸಹ ಕಾಂಗ್ರೆಸ್‌ಸರ್ಕಾರ ಲಕ್ಷ ಲಕ್ಷ ಹಣವನ್ನು ಎತ್ತಿಕೊಟ್ಟಿರುವುದು ಎಷ್ಟು ಸರಿ ? ಎಂದು ಜೆಡಿಎಸ್ ಪ್ರಶ್ನಿಸಿದೆ.

ರಾಜ್ಯದ ಸರ್ಕಾರಿ ಶಾಲೆಗಳ ದುರಸ್ತಿಗೆ ದುಡ್ಡಿಲ್ಲ, ಶಿಕ್ಷಕರ ನೇಮಕ ಮಾಡಲು ಹಣವಿಲ್ಲ. ಆದರೆ,  ಖರ್ಗೆ ಕುಟುಂಬದ ಖಾಸಗಿ ಶಿಕ್ಷಣ ಸಂಸ್ಥೆಗೆ ಹಣ ಕೊಡಲು ಅಡ್ಡಿಯಿಲ್ಲವೇ ಸಿದ್ದರಾಮಯ್ಯ ? ಎಂದು ತೀಕ್ಷ್ಣವಾಗಿ ಜೆಡಿಎಸ್ ಪ್ರಶ್ನಿಸಿದೆ.

- Advertisement - 

Share This Article
error: Content is protected !!
";