ಡಿಕೆ ಶಿವಕುಮಾರ್ ಅವರೇ ರಾಮನಗರ ಜಿಲ್ಲೆಗೆ ನಿಮ್ಮ ಕೊಡುಗೆ ಏನು?

News Desk

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಲವು ದಶಕಗಳಿಂದ ಅಧಿಕಾರ ಅನುಭವಿಸುತ್ತಿರುವ ಡಿ.ಕೆ ಶಿವಕುಮಾರ್ ಅವರೇ ರಾಮನಗರ ಜಿಲ್ಲೆಗೆ ನಿಮ್ಮ ಕೊಡುಗೆ ಏನು? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.

ಕನಕಪುರವನ್ನು ಅಭಿವೃದ್ಧಿ ಪಡಿಸದೆ, ಸ್ವಂತ ಪರಿಶ್ರಮದಿಂದ ಬಂಡೆಗಳನ್ನು ಕರಗಿಸಿದ್ದೇ ಲೂಟಿ ಬ್ರದರ್ಸ್‌ಸಾಧನೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.

ಈ ಹಿಂದೆ ಟೂರಿಂಗ್ ಟಾಕೀಸ್ ನಲ್ಲಿ ದಂಧೆ ನಡೆಸಿದ ಗಿರಾಕಿ ಯಾರು ? ಮಿಸ್ಟರ್ ಡಿಕೆಶಿ, ನೂರಾರು ಎಕರೆ ಅರಣ್ಯಭೂಮಿ ಒತ್ತುವರಿಯ ಹಸಿ ಸುಳ್ಳು ಆರೋಪ ಮಾಡುತ್ತಿರುವ, ಅಪರೂಪದ ಸಹೋದರರೇ ಬಂದು ಅಳತೆ ಮಾಡಿ ತೆಗೆದುಕೊಳ್ಳಿ ಎಂದು ಜೆಡಿಎಸ್ ಸವಾಲ್ ಹಾಕಿದೆ.
ಜೆಡಿಎಸ್‌ಪಕ್ಷ ಯಾರ ಜೊತೆ ಮೈತ್ರಿಮಾಡಿಕೊಳ್ಳಬೇಕು ಎನ್ನಲು ನೀವು ಯಾವ ದೊಣ್ಣೆ ನಾಯಕರು
? ಕರ್ನಾಟಕ, ಕನ್ನಡಿಗರು, ಕನ್ನಡ ಭಾಷೆ ಬಗ್ಗೆ ಮೊದಲು ಧ್ವನಿ ಎತ್ತುವುದು ಜನತಾದಳ ಪಕ್ಷವೇ ಹೊರತು, ಇಟಲಿ ಮಾತೆ ಮುಂದೆ ಮಂಡಿಯೂರಿ, ಗುಲಾಮಗಿರಿ ಮಾಡುವ ಕಾಂಗ್ರೆಸ್‌ಪಕ್ಷ ಅಲ್ಲ ಎಂದು ಜೆಡಿಎಸ್ ತಿರುಗೇಟು ನೀಡಿದೆ.

ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರ ಒಡೆತನದ ಆಸ್ತಿಗಳು ಮಾಲ್‌ಗಳು, ಅಪಾರ್ಟ್‌ಮೆಂಟ್‌ಗಳು, ಇಂಟರ್‌ನ್ಯಾಷನಲ್‌ಸ್ಕೂಲ್‌ಗಳು, ಹೈಟೆಕ್‌ಪಬ್‌ಗಳು  ಮೀತಿ ಮೀರಿ ಬೆಳೆದಿದೆ ಎಂದು ಜೆಡಿಎಸ್ ಆರೋಪಿಸಿದೆ.
“ಗ್ರೇಟರ್‌ಬೆಂಗಳೂರು” ಹೆಸರಲ್ಲಿ ಬಿಬಿಎಂಪಿಯನ್ನು 7 ಹೋಳು ಮಾಡುತ್ತಿರುವುದು
, ಸಾವಿರಾರು ಕೋಟಿಯ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸಲು ಹೊರಟಿರುವ ಶಕುನಿ ರಾಜಕಾರಣಿಯ ಕುತಂತ್ರದ ಭಾಗವಷ್ಟೆ ಎಂದು ಜೆಡಿಎಸ್ ಟೀಕಿಸಿದೆ.

 

- Advertisement -  - Advertisement - 
Share This Article
error: Content is protected !!
";