ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹರಿಯಬ್ಬೆ ಶಿವರುದ್ರಮ್ಮನವರ ಪುತ್ರ, ದಂತ ವೈದ್ಯ ಡಾ.ಹೆಚ್.ಶ್ರೀಧರ್(51) ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಅನಾರೋಗ್ಯ ಪೀಡಿತರಾಗಿದ್ದ ಡಾ.ಶ್ರೀಧರ್ ಚಿಕಿತ್ಸೆ ಫಲಕಾರಿಯಾಗಿದೆ ಹಿರಿಯೂರಿನ ಮನೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ತಾಯಿ ಮಾಜಿ ತಾಲೂಕು ಬೋರ್ಡ್ ಮೆಂಬರ್, ಶಿವರುದ್ರಮ್ಮ, ತಂದೆ ಹನುಮಂತರಾಯಪ್ಪ ಸೇರಿದಂತೆ ಪತ್ನಿ ದಂತ ವೈದ್ಯರು, ಪುತ್ರಿ, ಮೂವರು ಸಹೋದರಿಯರನ್ನು ಮೃತ ಡಾ.ಶ್ರೀಧರ್ ಅಗಲಿದ್ದಾರೆ.
ಹಿರಿಯೂರಿನ ಸಂಜೀವಿನಿ ಆಸ್ಪತ್ರೆಯ ಡಾ.ರಾಮಚಂದ್ರಪ್ಪನವರ ಪತ್ನಿ ಲತಾ ಅವರ ಸಹೋದರಿ ದಂತ ವೈದ್ಯೆಯನ್ನು ವಿವಾಹವಾಗಿದ್ದರು. ಅಲ್ಲದೆ ಸಂಜೀವಿನಿ ಆಸ್ಪತ್ರೆಯಲ್ಲೇ ಡೆಂಟಲ್ ಕ್ಲಿನಿಕ್ ತೆರೆದಿದ್ದು ಅತ್ಯಂತ ಸರಳ, ಸಜ್ಜನಿಕೆಯುಳ್ಳ ವೈದ್ಯರಾಗಿ ತುಂಬಾ ಹೆಸರು ಮಾಡಿದ್ದರು.
ಇವರ ಅಕಾಲಿಕ ಮರಣಕ್ಕೆ ತುತ್ತಾಗಿದ್ದು ಅನೇಕ ಗಣ್ಯರು ಮೃತರ ಆತ್ಮಕ್ಕೆ ಭಗವಂತನು ಶಾಂತಿ ಕರುಣಿಸಲಿ ಅವರ ಅಗಲಿಕೆಯ ನೋವನ್ನು ಬರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ, ಬಂಧು ಬಳಗದವರಿಗೆ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಕಂಬನಿ ಮಿಡಿದಿದ್ದಾರೆ.
ಮೃತರ ಅಂತ್ಯಕ್ರಿಯೆ ಶುಕ್ರವಾರ ಸಂಜೆ 4 ಗಂಟೆ ನಂತರ ಹುಟ್ಟೂರು ಹರಿಯಬ್ಬೆ ಗ್ರಾಮದ ಪಾಳ್ಯ ಸಮೀಪದ ತೋಟದ ಮನೆಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.