ಆಸ್ಥೆ, ಭಕ್ತಿ ಮತ್ತು ಇತಿಹಾಸದ ಸಂಕೇತವಾದ ಶಂಕರಲಿಂಗೇಶ್ವರ ಜಾತ್ರಾ ಮಹೋತ್ಸವ

News Desk

ಚಂದ್ರವಳ್ಳಿ ನ್ಯೂಸ್, ಯಾದಗಿರಿ:
ಗುರುಮಠಕಲ್ ತಾಲೂಕಿನ ಸುಕ್ಷೇತ್ರ ಇಡ್ಲೂರ ಗ್ರಾಮದ ಐತಿಹಾಸಿಕ ಶ್ರೀ ಕರುಣಾಮಯಿ ಶಂಕರಲಿಂಗೇಶ್ವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದ್ದು
, ಭಕ್ತರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸುತ್ತಿರುವ ಭಕ್ತರು ಈ ಪುಣ್ಯಕ್ಷೇತ್ರದಲ್ಲಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.

ಐತಿಹಾಸಿಕ ರಥೋತ್ಸವ ಮತ್ತು ಪುರಾವಂತಿಕೆ ಆಟ-
ಈ ಜಾತ್ರೆಯ ಪ್ರಮುಖ ಆಕರ್ಷಣೆಯಾದ ರಥೋತ್ಸವ ಸೇರಿದಂತೆ ಪುರಾವಂತಿಕೆ ಆಟ ಭಾಗವಾಗಿ ನಡೆಯುತ್ತಿದೆ. ಜಾತ್ರಾ ದಿನದಂದು
, ಭಕ್ತರು ಶ್ರೀ ಶಂಕರಲಿಂಗೇಶ್ವರನ ಪ್ರತಿಮೆಯನ್ನು ಅಲಂಕರಿಸಲ್ಪಟ್ಟ ರಥದಲ್ಲಿ ಇರಿಸಿ ದೇವಸ್ಥಾದ ಆವರಣದಲ್ಲಿ ರಥವನ್ನು ನಡೆಸುತ್ತಾರೆ. ಈ ರಥೋತ್ಸವದ ವೇಳೆ ದೇವರ ಕೃಪೆಯನ್ನು ಪಡೆಯಲು ಸಾವಿರಾರು ಭಕ್ತರು ಇಡ್ಲೂರಕ್ಕೆ ಆಗಮಿಸುತ್ತಾರೆ.
ಪಲ್ಲಿಕಿ ಉತ್ಸವ-
ಜಾತ್ರೆಯ ಒಂದು ಮಹತ್ವದ ಅಂಗವಾಗಿ ಪಲ್ಲಿಕಿ ಉತ್ಸವ ಕೂಡ ನಡೆಯುತ್ತದೆ. ಭಕ್ತರು ಪಲ್ಲಿಕಿಯಲ್ಲಿ ದೇವರ ಪ್ರತಿಮೆಯನ್ನು ಆರಾಧಿಸಿ
, ಭಕ್ತಿ ಸಮರ್ಪಣೆಯನ್ನು ಮಾಡುತ್ತಾರೆ.

 ಅಗ್ನಿಕುಂಡ ಮತ್ತು ಉಚ್ಚಾಯಿ ಮಹೋತ್ಸವ-
ಮಾರ್ಚ್-18 ರಂದು
ಬೆಳಗ್ಗೆ ಅಗ್ನಿಕುಂಡ ಪ್ರವೇಶ ಹಾಗೂ ಸಂಜೆ ಪವ (ಉಚ್ಚಾಯಿ) ಮಹೋತ್ಸವ 5:45 ಕ್ಕೆ ನಡೆಯಲಿದೆ. ಮಾ.19 ರಂದು ಸಂಜೆ 5:30 ಕ್ಕೆ ಸಹಸ್ರ ಭಕ್ತರ ಮಧ್ಯ ರಥೋತ್ಸವ ಜರುಗಲಿದೆ.

 ಐತಿಹಾಸಿಕ ಹಿನ್ನೆಲೆ-ಈ ದೇವಾಲಯವು 6ನೇ ಶತಮಾನದ ವಿಕ್ರಮಾದಿತ್ಯ ಕಾಲದಲ್ಲಿ ನಿರ್ಮಿತವಾಗಿದ್ದು, ಭೂಮಿಯಿಂದ ಸ್ವಯಂಭುವಾಗಿ (ಉದ್ಭವಗೊಂಡ) ಪರಮಸ್ವರೂಪಿಯಾದ ಶಂಕರಲಿಂಗಮೂರ್ತಿಯನ್ನು ಹೊಂದಿದೆ. ಶತಮಾನಗಳ ಇತಿಹಾಸ ಹೊಂದಿರುವ ಈ ಕ್ಷೇತ್ರವು ಆಧ್ಯಾತ್ಮಿಕ ಶಕ್ತಿಯ ಸಂಕೇತವಾಗಿ ಭಕ್ತರ ಹೃದಯದಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ.

ಶಿಲ್ಪಕಲೆ ಮತ್ತು ವಿಶೇಷತೆಗಳು- ದೇವಸ್ಥಾನದ ಪ್ರಮುಖ ಆಕರ್ಷಣೆಗಳು: ನಾದಹೊಳೆಯುವ ಕಂಬಗಳು:
ದೇವಾಲಯದಲ್ಲಿರುವ ಕೆಲವು ಪ್ರಾಚೀನ ಕಂಬಗಳನ್ನು ಹೊಡೆದರೆ ವಿವಿಧ ಸ್ವರಗಳು ಬರುತ್ತವೆ. ಈ ವಿಶೇಷತೆ ಭಕ್ತರಿಗೆ ಅನನ್ಯ ಅನುಭವ ನೀಡುತ್ತದೆ. ಪ್ರಾಚೀನ ಶಿಲ್ಪ ಮತ್ತು ಲಿಪಿಗಳ ಆವಿಷ್ಕಾರ:

 ಈ ದೇವಸ್ಥಾನದ ಗೋಡೆಗಳಲ್ಲಿ ಅನೇಕ ಮುನುಕುಚಿತ್ರಗಳು ಕೆತ್ತಲಾಗಿದೆ. ಹಾಗೆಯೇ, ಒಂದು ವಿಶೇಷ ಶಿಲಾ ಕಂಬದಲ್ಲಿ ಪುರಾತನ ಲಿಪಿ ಉದ್ದೇಶಿತವಾಗಿ ಬರೆಯಲಾಗಿದೆ, ಇದು ಶಾಸನ ಪ್ರಿಯರ ಗಮನ ಸೆಳೆಯುತ್ತಿದೆ.

 ದೇವಾಲಯದ ಆವರಣದಲ್ಲಿ ನವಗ್ರಹವಿದೆ ಒಳಭಾಗದ ಬಲಭಾಗದಲ್ಲಿ ವೀರಭದ್ರೇಶ್ವರನ ಮೂರ್ತಿ ಇದೆ. ಎಡಭಾಗದಲ್ಲಿ ಬಸವಣ್ಣನ ಮೂರ್ತಿ ಸ್ಥಾಪಿತವಾಗಿವೆ.

ದೇವಸ್ಥಾನದ ಆವರಣದಲ್ಲಿ ಜಾತ್ರಾ ಮಹೋತ್ಸವದ ಭಾಗವಾಗಿ ಪ್ರಥಮ ಬಾರಿಗೆ ಶಿವರಾತ್ರಿ ಪ್ರಯುಕ್ತ ವಿಶೇಷ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಊರಿನ ಹಿರಿಯರು, ಕಿರಿಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ಪ್ರವಚನ ಕಾರ್ಯಕ್ರಮದಲ್ಲಿ ಪಂಡಿತರು ಶಿವತತ್ತ್ವ, ಭಕ್ತಿಯ ಮಹತ್ವ, ಶಂಕರಲಿಂಗೇಶ್ವರನ ಮಹಿಮೆ ಹಾಗೂ ನಮ್ಮ ಸಂಸ್ಕೃತಿಯ ವೈಭವದ ಬಗ್ಗೆ ಮಾರ್ಮಿಕವಾಗಿ ವಿವರಿಸಿದರು. ಭಕ್ತರು ಮನಸ್ಸಾರೆ ಈ ಪ್ರವಚನಗಳನ್ನು ಕೇಳಿ, ದೇವರ ಮಹಿಮೆ ಮೆಲುಕುಹಾಕಿದರು.
ಈ ಕಾರ್ಯಕ್ರಮವು ಇಡ್ಲೂರ ಗ್ರಾಮಕ್ಕೆ ಆಧ್ಯಾತ್ಮಿಕ ಚೈತನ್ಯ ತುಂಬಿದ ಕ್ಷಣವಾಗಿದ್ದು
, ಮುಂದಿನ ವರ್ಷಗಳಲ್ಲೂ ಈ ಪ್ರವಚನ ಪರಂಪರೆಯನ್ನು ಮುಂದುವರಿಸಲು ಊರಿನ ಜನರು ಆಶಯ ವ್ಯಕ್ತಪಡಿಸಿದ್ದಾರೆ. ಜಾತ್ರಾ ಮಹೋತ್ಸವದ ಈ ಹೊಸ ಆಯಾಮ ಗ್ರಾಮದಲ್ಲಿ ಭಕ್ತಿ ಮತ್ತು ಒಗ್ಗಟ್ಟಿನ ಸಂಕೇತವಾಗಿ ಉಳಿಯಲಿದೆ.

ಜಾತ್ರಾ ಮಹೋತ್ಸವದ ವೈಭವ-
ಜಾತ್ರಾ ದಿನದಂದು ಸಾವಿರಾರು ಭಕ್ತರು ಈ ಪುಣ್ಯಕ್ಷೇತ್ರಕ್ಕೆ ಆಗಮಿಸುತ್ತಾರೆ. ವಿಶೇಷವಾಗಿ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಭಕ್ತರು ಶ್ರೀ ಶಂಕರಲಿಂಗೇಶ್ವರನ ಕೃಪೆ ಪಡೆಯಲು ದಂಡೆಯಾಗಿ ಬರುತ್ತಾರೆ.

ಜಾತ್ರಾ ಹಬ್ಬದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ, ಅದರಲ್ಲಿ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ರಥೋತ್ಸವ ಮತ್ತು ಅನ್ನದಾಸೋಹ ಪ್ರಮುಖವಾಗಿವೆ. ಈ ಎಲ್ಲಾ ಕಾರ್ಯಕ್ರಮಗಳು ಭಕ್ತರಲ್ಲಿ ಭಕ್ತಿಭಾವ ಮತ್ತು ಹರ್ಷೋಲ್ಲಾಸ ಮೂಡಿಸುತ್ತವೆ.

 ಸುಕ್ಷೇತ್ರ ಇಡ್ಲೂರ ಶ್ರೀ ಶಂಕರಲಿಂಗೇಶ್ವರ ಜಾತ್ರಾ ಮಹೋತ್ಸವ ನುಡಿಗಟ್ಟಿನಲ್ಲಿ ಭಕ್ತರ ನಂಬಿಕೆಯ ಸಂಕೇತವಾಗಿ ಮುಂದುವರಿಯುತ್ತಿದೆ.
ಇಡ್ಲೂರದ ಶ್ರೀ ಕರುಣಾಮಯಿ ಶಂಕರಲಿಂಗೇಶ್ವರ ಜಾತ್ರಾ ಮಹೋತ್ಸವ ಭಕ್ತರ ನಂಬಿಕೆ, ಪರಂಪರೆ ಮತ್ತು ಸಂಸ್ಕೃತಿಯ ಸಂಕೇತವಾಗಿದೆ. ಈ ದೇವಸ್ಥಾನವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಭಕ್ತರಿಗೆ ಆಧ್ಯಾತ್ಮಿಕ ಶಕ್ತಿಯ ಅನುಭವವನ್ನು ನೀಡುವ ಪಾವನ ಕ್ಷೇತ್ರ. ಸಾವಿರಾರು ಭಕ್ತರು ಈ ಪುಣ್ಯ ಭೂಮಿಗೆ ಆಗಮಿಸಿ, ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.

ಜಾತ್ರೆಯ ಸಮಯದಲ್ಲಿ ದೇವಸ್ಥಾನದಲ್ಲಿ ಭಕ್ತಿಯ ಬೆಳಕನ್ನು ಹರಡುತ್ತವೆ ಮತ್ತು ಸಮಾಜದಲ್ಲಿ ಒಗ್ಗಟ್ಟಿನ ಸಂದೇಶ ನೀಡುತ್ತವೆ. ದೇವಸ್ಥಾನದ ಉನ್ನತ ಬೆಳವಣಿಗೆಗಾಗಿ ಹಗಲಿರುಳ್ಳೆನ್ನದೆ ಶ್ರಮಿಸುತ್ತಿರುವ ಭಕ್ತರಿಗೆ ಅನಂತ ಕೋಟಿ ಭಕ್ತಿಯ ನಮನಗಳು. ಈ ಪರಂಪರೆ ನಿರಂತರವಾಗಿ ಬೆಳೆಯಲಿ, ಜಾತ್ರೆಯ ವೈಭವ ವರ್ಷಕ್ಕೊಂದು ಹೆಚ್ಚಲಿ ಎಂದು ಇಡ್ಲೂರ ಗ್ರಾಮದ ಯುವಕ ಚಂದನ್ ಅವಂಟಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ!”

 

- Advertisement -  - Advertisement - 
Share This Article
error: Content is protected !!
";