ಖಾಸಗಿ ವಾಹನಗಳ ಮೇಲೆ ಸರ್ಕಾರದ ಹೆಸರು, ಚಿಹ್ನೆ ಮತ್ತು ಲಾಂಛನ ದುರ್ಬಳಕೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಕರ್ನಾಟಕ ಕಾಂಗ್ರೆಸ್
ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಪುಡಾರಿಗಳ ಕಾರುಬಾರು ಜೋರಾಗಿದೆ ಎಂದು ಜೆಡಿಎಸ್ ಹಲವು ಛಾಯಾ ಚಿತ್ರಗಳನ್ನು ಬಿಡುಗಡೆ ಮಾಡಿ ಆಕ್ಷೇಪ ವ್ಯಕ್ತಪಡಿಸಿದೆ.
ಗ್ಯಾರಂಟಿ ಅನುಷ್ಠಾನ
, ಮೌಲ್ಯಮಾಪನ ಸಮಿತಿಗೆ ಕಾಂಗ್ರೆಸ್‌ಕಾರ್ಯಕರ್ತರ ಕಾನೂನು ಬಾಹಿರವಾಗಿ ನೇಮಿಸಿಕೊಂಡು, ಅವರಿಗೆ ಸಂಬಳ, ಭತ್ಯೆಗಾಗಿ ವರ್ಷಕ್ಕೆ 72 ಕೋಟಿ ರೂ. ಸರ್ಕಾರದ ಬೊಕ್ಕಸದ ಹಣ ಪೋಲು ಮಾಡಲಾಗುತ್ತಿದೆ ಎಂದು ಜೆಡಿಎಸ್ ದೂರಿದೆ.

ಲೂಟಿಕೋರ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಭ್ರಷ್ಟಾಚಾರದ ಒಡ್ಡೋಲಗದಲ್ಲಿ ಕಾರ್ಯಕರ್ತರಿಗೆ ಬಿಟ್ಟಿ ಸಂಬಳ ನೀಡಿ ಕೊಬ್ಬಿಸಲಾಗುತ್ತಿದೆ. ಗ್ಯಾರಂಟಿ ಸಮಿತಿಗೆ ನೇಮಕವಾಗಿರುವ ಬರಗೆಟ್ಟ ಕಾಂಗ್ರೆಸ್ ಪುಡಾರಿಗಳು ಜನರಿಂದ ಆಯ್ಕೆಯಾದ ಶಾಸಕರಿಗಿಂತಲೂ ಹೆಚ್ಚು ಮೆರೆಯುತ್ತಿದ್ದಾರೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.

ಜನರ ಬೆವರಿನ ತೆರಿಗೆ ಹಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜಾತ್ರೆ ಮಾಡುತ್ತಿದ್ದಾರೆ. ವೈಯಕ್ತಿಕ ಬಳಕೆಯ ಖಾಸಗಿ ವಾಹನಗಳ ಮೇಲೆ ಕರ್ನಾಟಕ ಸರ್ಕಾರದ ಹೆಸರು, ಚಿಹ್ನೆ ಮತ್ತು ಲಾಂಛನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ಹರಿಹಾಯ್ದಿದೆ.

ಇದು ಕ್ರಿಮಿನಲ್ ಅಪರಾಧವಾಗಿದ್ದು, ಪೊಲೀಸರು ಅನಧಿಕೃತವಾಗಿ ಸರ್ಕಾರದ ಚಿಹ್ನೆ, ಹೆಸರು, ಲಾಂಛನವನ್ನು ಬಳಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಆಗ್ರಹ ಮಾಡಿದೆ.

 

 

- Advertisement -  - Advertisement - 
Share This Article
error: Content is protected !!
";