ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ನಾಸಾದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಕಳೆದ 8-9 ತಿಂಗಳಿನಿಂದ ಅಂತರಿಕ್ಷದಲ್ಲಿ ಸಿಲುಕಿಕೊಂಡಿರುವ ವಿಷಯ ಎಲ್ಲರಿಗೂ ತಿಳಿದ ವಿಷಯ. ಈಗ ಅವರನ್ನು ಕರೆತರಲು ಟೆಸ್ಲಾ ಸಂಸ್ಥೆಯ ಸ್ಪೇಸ್ ಎಕ್ಸ್ ಮತ್ತು ನಾಸಾ ಕ್ರೂ -10 ಕಾರ್ಯಾಚರಣೆ ಪ್ರಾರಂಭಿಸಿವೆ.
ಕ್ರೂ -10 ಸದಸ್ಯರನ್ನು ಹೊತ್ತ ಸ್ಪೇಸ್ ಎಕ್ಸ್ ಫಾಲ್ಕನ್ 9 ರಾಕೆಟ್ ಮಾರ್ಚ್ 15 ರಂದು ಫ್ಲೋರಿಡಾದ ನಾಸಾ ಕೆನಡಿ ಬಾಹ್ಯಾಕಾಶದಿಂದ ಸಂಜೆ 7.05 ಕ್ಕೆ ಉಡಾವಣೆಯಾಯಿತು.
ಇದರೊಂದಿಗೆ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೊರ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಇದೇ ತಿಂಗಳ 19 ರಂದು ವಾಪಾಸ್ ಭೂಮಿಗೆ ಬರುವುದು ಖಚಿತವಾಗಿದೆ ಎಂದು ಎಚ್ ಎಸ್ ಟಿ ಸ್ವಾಮಿ ಅವರು ತಿಳಿಸಿದ್ದಾರೆ.
ನಾಸಾದ ಆನ್ ಮೆಕ್ ಕ್ಲೇನ್ ಮತ್ತು ನಿಕೋಲ್ ಆಯರ್ಸ್, ಜಪಾನ್ ಏರೋಸ್ಪೇಸ್ ಎಕ್ಸ್ ಪ್ಲೋರೇಶನ್ ಏಜೆನ್ಸಿಯ ಟುಕಿಯಾ ಒನಿಷಿ ಮತ್ತು ರೋಸ್ಕೋಸ್ಮೋಸ್ ನ ಕಿರಿಲ್ ಪೆಸ್ಕೊವ್ ಈ ಕಾರ್ಯಾಚರಣೆಯಲ್ಲಿದ್ದಾರೆ. ನಾಸಾ ಹಾಗೂ ಸ್ಪೇಸ್ ಎಕ್ಸ್ ನ ಗಗನಯಾತ್ರಿಗಳು ಸುನಿತಾ ಹಾಗೂ ವಿಲ್ಮರ್ ಅವರನ್ನು ಫಾಲ್ಕನ್ 9 ರಾಕೆಟ್ ನಲ್ಲಿ ಭೂಮಿಗೆ ಕಳುಹಿಸಿ ಅವರ ಬದಲಿಗೆ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಉಳಿದುಕೊಳ್ಳಲಿದ್ದಾರೆ. ಕಾರ್ಯಾಚರಣೆಯ ಮೊದಲ ಎರಡು ದಿನಗಳಲ್ಲಿ ಗಗನಯಾತ್ರಿಗಳನ್ನು ಬದಲಾಯಿಸುವ ಮತ್ತು ಅವರ ಕರ್ತವ್ಯಗಳನ್ನು ವಹಿಸಿಕೊಳ್ಳುವ ಪ್ರಕ್ರಿಯೆಗಳು ನಡೆಯಲಿವೆ. ಎಂದು ವಾಷಿಂಗ್ಟನ್ ಪತ್ರಿಕೆ ವರದಿ ಮಾಡಿದೆ ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ.ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.