ಯುಗಾದಿ ಹಬ್ಬ ಹಿಂದೂಗಳಿಗೆ ಹೊಸ ವರ್ಷದ ಆರಂಭ-ಯಶೋಧಾ ಪ್ರಕಾಶ್

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ-ಯುಗಾದಿ ಹಬ್ಬವು ಹಿಂದೂಗಳಿಗೆ ಹೊಸ ವರ್ಷದ ಆರಂಭವಾಗಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ  ಯಶೋಧಾ ಪ್ರಕಾಶ್ ಅಭಿಪ್ರಾಯಪಟ್ಟರು.

ಶಿವನಗರದ ತಮ್ಮ ಜಿ‌.ವಿ.ಎಸ್ ನಿವಾಸದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು “ಯುಗಾದಿ ಹಬ್ಬದ ಹಿರಿಮೆ-ಗರಿಮೆ”ಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ವಸಂತ ಋತುವಿನಲ್ಲಿ ಬರುವ ಯುಗಾದಿ ಹಬ್ಬವು ಹಿಂದೂಗಳ ಪಾಲಿಗೆ ಪವಿತ್ರ ಪರ್ವವಾಗಿದ್ದು

- Advertisement - 

ಹಬ್ಬದ ಪ್ರಯುಕ್ತ ಆಚರಿಸಲಾಗುವ ಧಾರ್ಮಿಕ ಕಾರ್ಯಗಳ ಹಿಂದೆ ವೈಜ್ಞಾನಿಕ ಮತ್ತು ಆರೋಗ್ಯದ ಒಳಗುಟ್ಟಿದೆ ಎಂದು ತಿಳಿಸಿದರು.ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀಲಲಿತಾ ಸಹಸ್ರನಾಮ ಪಠಣ, ವಿಶೇಷ ಭಜನೆ ಮತ್ತು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು.

ಈ ಸತ್ಸಂಗ ಸಭೆಯಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಭಾಗ್ಯಲಕ್ಷ್ಮೀ, ರಶ್ಮಿ ರಮೇಶ್, ಮಂಗಳ, ಶಾಂತಮ್ಮ, ಯತೀಶ್ ಎಂ ಸಿದ್ದಾಪುರ, ಮಾಣಿಕ್ಯ ಸತ್ಯನಾರಾಯಣ, ವಿಜಯಲಕ್ಷ್ಮಿ, ಗೀತಾಲಕ್ಷ್ಮೀ, ದ್ರಾಕ್ಷಾಯಣಿ, ವೀರಮ್ಮ,ಕೆ.ಎಸ್ ವೀಣಾ,ಶೈಲಜ, ಕೃಷ್ಣವೇಣಿ, ನಾಗರತ್ನಮ್ಮ, ಶಾರದಮ್ಮ, ಸೌಮ್ಯ, ಭ್ರಮರಂಭಾ ಇದ್ದರು.

- Advertisement - 

Share This Article
error: Content is protected !!
";