ಮಾತನಾಡುತಿದೆ ಮನೆಯ ತೋರಣ!!

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಮಾತನಾಡುತಿದೆ
ಮನೆಯ ತೋರಣ*

ಅದೇನು ಸಂಭ್ರವೋ
ನಾ ಕಾಣೆ
ಹಬ್ಬ ಬಂದರೆ ಹೊರ
ಬರುವ ಮನೆಯ
ತೋರಣಕೆ

- Advertisement - 

 ಅದೆಷ್ಟು ಸಂವತ್ರರಗಳ
ಕಂಡಿತೋ ನಾಕಾಣೆ

ಇಂದಿಗೂ ಮದುವಣಗಿತ್ತಿಯಂತೆ
ಕಂಗೊಳಿಸಿ ನಳನಳಿಸುತಿದೆ
ನಿನ್ನ ಹೆಣೆದವರ್ಯಾರೋ
ಬಣ್ಣ ಬಣ್ಣದ ಹೂ ತುಂಬಿ

- Advertisement - 

ಅಂದಗೊಳಿಸಿದವರು ಇಂದಿಲ್ಲ
ನೆನಪಿಟ್ಟುಕೊಡಿರುವೆ
ಮಧುರ ಕ್ಷಣಗಳ
ನಿನ್ನೊಡಲ ಗರ್ಭದಲ್ಲಿ

 ಓ…ಬಾಗಿಲ ತೋರಣವೇ
ಸಿಂಗರಿಸಿ ಹಬ್ಬ ಹರಿದಿನಗಳ ಸಂಬ್ರಮ
ಹೆಚ್ಚಿಸಿ ಮರೆಯಾಗುವೆ
ಮರಳಿ ಬರುವೆ

ಮುಂದಿನ ಸಂವತ್ಸರದ
ಹಬ್ಬಗಳಿಗೆ
ತೋರಣವೆ…. ಕಂಗೊಳಿಸುತಿರು
ಅನುದಿನವು

ಹರುಷ ,ನೆಮ್ಮದಿಯ
ಹೊನಲು ಸೂಸಿ
ರಚನೆ: ಗುರಾನಿ, ಜಿ ಆರ್ ನಿಂಗೋಜಿ ರಾವ್, ದಾವಣಗೆರೆ
9036389240

Share This Article
error: Content is protected !!
";