ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿಗೆ ಆಗಮಿಸಿದ ಭಾರತೀಯ ಜನತಾ ಪಾರ್ಟಿಯ ಹಿರಿಯ ನೇತಾರರು, ಭಾರತದ ಸುರಕ್ಷತೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಕೇಂದ್ರದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಇತರೆ ಬಿಜೆಪಿ ನಾಯಕರು ಹೃದಯಪೂರ್ವಕವಾಗಿ ಸ್ವಾಗತಿಸಿದರು.
ಸಂಘಟನೆಯ ಹಿರಿತನ ಹಾಗೂ ಕರ್ನಾಟಕದ ಬಗ್ಗೆ ವಿಶೇಷ ಪ್ರೀತಿಯನ್ನಿರಿಸಿಕೊಂಡಿರುವ ರಾಜನಾಥ್ ಸಿಂಗ್ ಜೀ ಅವರು ಪೂಜ್ಯ ಡಾ. ಶಿವಕುಮಾರ ಮಹಾಸ್ವಾಮಿಜಿಗಳ ಜಯಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಶ್ರೀಗಳ ಲಕ್ಷಾಂತರ ಭಕ್ತರಿಗೆ ಸಂತಸವನ್ನುಂಟುಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಸಂಘಟನೆಯ ಬೆಳವಣಿಗೆಯ ಕುರಿತು ಸದಾ ಆಸಕ್ತಿ ವಹಿಸುವ ಮಾನ್ಯ ರಾಜನಾಥ್ ಸಿಂಗ್ ಅವರ ಮಾರ್ಗದರ್ಶನ ಕರ್ನಾಟಕ ಬಿಜೆಪಿ ಪಕ್ಷಕ್ಕೆ ನಿರಂತರವಾಗಿರಲಿ ಎಂದು ಅವರಲ್ಲಿ ಭಿನ್ನವಹಿಸಿಕೊಳ್ಳಲಾಯಿತು ಎಂದು ವಿಜಯೇಂದ್ರ ತಿಳಿಸಿದರು.
ಈ ಸಂದರ್ಭದಲ್ಲಿ ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.