ಉಚಿತ ಬೇಸಿಗೆ ಕ್ರೀಡಾ ತರಬೇತಿ ಶಿಬಿರ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ವಾಲಿಬಾಲ್, ಅಥ್ಲೆಟಿಕ್ಸ್ ಮತ್ತು ಷಟಲ್ ಬ್ಯಾಡ್ಮಿಂಟನ್ ಕ್ರೀಡೆಗಳಿಗೆ ಸಂಬಂಧಿಸಿದಂತೆ, ಉಚಿತ ಬೇಸಿಗೆ ಕ್ರೀಡಾ ತರಬೇತಿ ಶಿಬಿರ ಆಯೋಜಿಸಲಾಗಿದೆ.

- Advertisement - 

ಏಪ್ರಿಲ್ 07 ರಿಂದ 30 ವರೆಗೆ ಕ್ರೀಡಾ ತರಬೇತಿ ಶಿಬಿರ ನಡೆಯಲಿದ್ದು, ಹಾಸ್ಟೆಲ್ ಮಕ್ಕಳು ಸೇರಿದಂತೆ ಕ್ರೀಡೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಹಾಗೂ ಕ್ರೀಡಾಪಟುಗಳು ಶಿಬಿರದ ಸದಪಯೋಗ ಪಡೆದುಕೊಳ್ಳಬಹುದು. ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಕ್ರೀಡೆಗಳ ತರಬೇತಿ ನೀಡಲಾಗುವುದು.

- Advertisement - 

ವಾಲಿಬಾಲ್ ತರಬೇತಿ ನೊಂದಣಿಗೆ ತರಬೇತುದಾರ ಮಹಮ್ಮದ್ ಮುಹೀಬುಲ್ಲಾ ದೂರವಾಣಿ ಸಂಖ್ಯೆ 9611673475, ಅಥ್ಲೆಟಿಕ್ಸ್ ನೊಂದಣಿಗೆ ತರಬೇತುದಾರ ತಿಪ್ಪಣ್ಣ.ಎಸ್.ಮಾಳಿ ದೂರವಾಣಿ ಸಂಖ್ಯೆ 9380889647, ಷಟಲ್ ಬ್ಯಾಡ್ಮಿಂಟನ್ ನೊಂದಣಿಗೆ ತರಬೇತುದಾರ ಗುರುಮೂರ್ತಿ ದೂರವಾಣಿ ಸಂಖ್ಯೆ 9481038141 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

 

- Advertisement - 

Share This Article
error: Content is protected !!
";