ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷದ ಆಡಳಿತ ಗೊಂದಲದಿಂದ ಆಡಳಿತ ಯಂತ್ರದ ಮೇಲೆ ನಕಾರಾತ್ಮಕ ಪರಿಣಾಮಬೀರಿದೆ. ಅರ್ಥಿಕ ಇಲಾಖೆಯೂ ಸೇರಿದಂತೆ ಪ್ರಮುಖ 30ಕ್ಕೂ ಅಧಿಕ ಇಲಾಖೆಗಳಲ್ಲಿ ಶೇ. 45ರಷ್ಟು ಕಡತಗಳು ವಿಲೇವಾರಿ ಆಗಿಲ್ಲ. ಬರೋಬ್ಬರಿ 71 ಸಾವಿರ ಕಡತಗಳು ವಿಲೇವಾರಿ ಆಗದೆ ಇಲಾಖಾ ಕಚೇರಿಗಳಲ್ಲೇ ಧೂಳು ತಿನ್ನುತ್ತಿವೆ ಎಂದು ಬಿಜೆಪಿ ಆರೋಪ ಮಾಡಿದೆ.
ಕಾಲಮಿತಿಯಲ್ಲಿ ಕಡತಗಳು ವಿಲೇವಾರಿ ಆಗಬೇಕೆಂಬ ಸ್ಪಷ್ಟ ನಿಯಮವಿದ್ದರೂ ಅದರ ಪಾಲನೆ ಸಿದ್ದರಾಮಯ್ಯ ಸರ್ಕಾರದಲ್ಲಿ ಮಾತ್ರ ಅಗುತ್ತಿಲ್ಲ. ವಿಶೇಷ ಅಂದರೆ ಸುಮಾರು 25 ಇಲಾಖೆಗಳಲ್ಲಿ ಶೇ. 50ರಷ್ಟು ಫೈಲ್‌ಗಳಿಗೆ ಚಾಲನೆಯೇ ಸಿಕ್ಕಿಲ್ಲ.
ಒಟ್ಟಿನಲ್ಲಿ ಸಿದ್ದು Vs ಡಿಕೆಶಿ ಕುರ್ಚಿ ಪೈಪೋಟಿಯಲ್ಲಿ, ರಾಜ್ಯದ ಜನತೆಗೆ ಉಚಿತ ಬೆಲೆ ಏರಿಕೆ ಗ್ಯಾರಂಟಿ ಹೊರತುಪಡಿಸಿ, ಅಭಿವೃದ್ಧಿ, ಜನಪರ ಯೋಜನೆಗಳು ಮರೀಚಿಕೆಯಾಗಿದೆ ಎಂದು ಬಿಜೆಪಿ ಆರೋಪಿಸಿದೆ.