ಕ್ರಿಕೆಟ್ ಪಂದ್ಯಾವಳಿಗೆ ಬೆಂಗಳೂರು ತಂಡಕ್ಕೆ ಟೀ ಶರ್ಟ್ ನೀಡಿ ಶುಭ ಹಾರೈಸಿದ ಶಿವಾನಂದ ತಗಡೂರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು;
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದಿಂದ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಏ.12 ಮತ್ತು 13ರಂದು ಏರ್ಪಡಿಸಿರುವ ಕ್ರಿಕೆಟ್ ಪಂದ್ಯಾವಳಿಗೆ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಬೆಂಗಳೂರು ತಂಡದ ಟೀ ಶರ್ಟ್ ಹಾಗೂ ಕ್ರೀಡಾ ಪರಿಕರಗಳನ್ನು ಅನಾವರಣಗೊಳಿಸಿದರು.

- Advertisement - 

ನಗರದ ಪ್ರೆಸ್ ಕ್ಲಬ್ ನಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಆಟಗಾರರಿಗೆ ಟೀ ಶರ್ಟ್, ಶೂ ವಿತರಿಸಿ ಮಾತನಾಡಿದ ಅವರು, ಕ್ರೀಡಾ ಹಬ್ಬದಲ್ಲಿ ಬೆಂಗಳೂರು ಕಾರ್ಯನಿರತ ಸಂಘದ ತಂಡ ವೈ.ಎಸ್.ಎಲ್ ಸ್ವಾಮಿ ಸಾರಥ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಹ್ಯಾಟ್ರಿಕ್ ಸಾಧನೆ ಮಾಡುವಂತಾಗಲಿ ಎಂದರು.

- Advertisement - 

ಈಗಾಗಲೇ ಮಂಡ್ಯ ಮತ್ತು ಮಂಗಳೂರಿನಲ್ಲಿ ನಡೆದ ಪಂದ್ಯಾವಳಿಯಲ್ಲಿ ಬೆಂಗಳೂರು ತಂಡ ಗದ್ದಿದೆ. ಸತತ ಮೂರನೇ ಬಾರಿಗೆ ವಿಜಯಶಾಲಿಯಾಗುವಂತೆ ಹಾರೈಸಿದರು.

ಈ ಬಾರಿ ಎಲ್ಲಾ ತಂಡಗಳು ಉತ್ತಮ ಅಭ್ಯಾಸ ನಡೆಸುತ್ತಿದ್ದು, ಪಂದ್ಯಾವಳಿ ಅತ್ಯಂತ ಕಠಿಣ ಪೈಪೋಟಿಯಿಂದ ಕೂಡಿರಲಿದ್ದು, ಉತ್ತಮ ಪಂದ್ಯಗಳಿಗೆ ಟೂರ್ನಿ ಸಾಕ್ಷಿಯಾಗಲಿದೆ. ಹಾಸನದಲ್ಲಿ ಪ್ರತಿಯೊಬ್ಬರ ಪತ್ರಕರ್ತರು ಕ್ರೀಡಾ ಸ್ಫೂರ್ತಿ ಮೆರೆಯುವಂತಾಗಲಿ ಎಂದರು.

- Advertisement - 

ಈ ಸಂದರ್ಭದಲ್ಲಿ ಬೆಂಗಳೂರು ಕಾರ್ಯನಿರತ ಸಂಘದ ತಂಡದ ಸದಸ್ಯರಾದ ವಿ. ನಂಜುಂಡಪ್ಪ.ವಿ. ಧ್ಯಾನ್ ಪೊಣ್ಣಚ್ಚ, ಮಂಜುನಾಥ್, ಗಿರೀಶ್ ಗರಗ, ರಾಘವೇಂದ್ರ ಗಂಗಟ್ಕರ್, ಶಿವರಾಜ್, ಭಾರತಿ ರಾಜನ್ ಮತ್ತಿತರರು ಉಪಸ್ಥಿತರಿದ್ದರು.

 

 

 

Share This Article
error: Content is protected !!
";