ಪುರೋಹಿತಶಾಹಿ ಕಲ್ಪಿಸಿದ ಸ್ವರ್ಗ-ನರಕಾದಿ ಶೋಷಕ ತಂತ್ರ ಧಿಕ್ಕರಿಸಿದ ಬಸವಣ್ಣ-ಸಿಎಂ

News Desk

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇವಸ್ಥಾನಗಳನ್ನು ನಿರಾಕರಿಸಿ
, ದೇವರ  ಕಲ್ಪನೆಯನ್ನು ಮನುಷ್ಯನ ಶರೀರಕ್ಕೆ ಸ್ಥಳಾಂತರಗೊಳಿಸಿ, ದೇಹವನ್ನೇ ದೇವಾಲಯವನ್ನಾಗಿ ಮಾಡಿದವರು ಬಸವಣ್ಣನವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

- Advertisement - 

ಪುರೋಹಿತಶಾಹಿ ಕಲ್ಪಿಸಿದ ಸ್ವರ್ಗ – ನರಕಾದಿ ಶೋಷಕ ತಂತ್ರಗಳನ್ನು ಧಿಕ್ಕರಿಸಿ ಇಹದ ಬದುಕಿನ ಮೇಲಿನ ಪ್ರೀತಿಯನ್ನು ಮೂಢಿಸಿದ, ಅನೇಕ ಅವೈಚಾರಿಕವಾದ ಆಚರಣೆಗಳನ್ನೂ ಮೂಢನಂಬಿಕೆಗಳನ್ನು ತಿರಸ್ಕರಿಸಿದ, ವೃತ್ತಿಯ ತಾರತಮ್ಯಗಳ ಮೇಲಿನಿಂದ ಮನುಷ್ಯನ ಸಾಮಾಜಿಕ ಅಂತಸ್ತನ್ನು ಪರಿಗಣಿಸದೆ ಕಾಯಕವೆಲ್ಲವೂ ಪೂಜ್ಯವೆಂದು ಸಾರಿದವರು ಬಸವಣ್ಣ ಎಂದು ಸಿಎಂ ಹೇಳಿದರು.

- Advertisement - 

ನಾವಿಂದು ಸಂಘರ್ಷಮಯವಾದ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯ ಬಂಧಿಯಾಗಿದ್ದೇವೆ. ನಾ‍ಲ್ಕು ದಿಕ್ಕುಗಳಿಂದಲೂ ಹಿಂಸೆ, ಸೇಡು, ಪ್ರತಿಕಾರಗಳ ಘೋಷಣೆಗಳು ಮೊಳಗುತ್ತಿರುವ ಈ ಕಾಲದಲ್ಲಿ ಬಸವಣ್ಣನವರು ನೀಡಿದ್ದ ‘‘ದಯೆಯೇ ಧರ್ಮದ ಮೂಲವಯ್ಯಾ’’ ಎಂಬ ಶಾಂತಿ-ಸೌಹಾರ್ದತೆಯ ಮಂತ್ರವನ್ನು ನಾವೆಲ್ಲರೂ ಮನನ ಮಾಡಿಕೊಳ್ಳಬೇಕಾಗಿದೆ ಎಂದು ಸಿದ್ದರಾಮಯ್ಯ ತಾಕೀತು ಮಾಡಿದರು.

ಅಂತಹ ಅರಿವಿನ ಬೆಳಕನ್ನು ನಮ್ಮೆಲ್ಲರಲ್ಲಿಯೂ ಬಸವಣ್ಣ ಮೂಡಿಸಲಿ ಎಂದು ಹಾರೈಸುತ್ತೇನೆ. ನಾಡಬಂಧುಗಳಿಗೆ ಬಸವ ಜಯಂತಿಯ ಶುಭಾಶಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

- Advertisement - 

 

Share This Article
error: Content is protected !!
";