ಚಂದ್ರವಳ್ಳಿ ಪತ್ರಿಕೆ ವಿತರಕ, ವರದಿಗಾರನ ಪುತ್ರಿಗೆ ಅತ್ಯುತ್ತಮ ಅಂಕ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರ ಮತ್ತು ತಾಲೂಕಿನ ಚಂದ್ರವಳ್ಳಿ ಪತ್ರಿಕೆ ವಿತರಕರು ಮತ್ತು ವರದಿಗಾರರಾದ ಮಲ್ಲಪ್ಪನಹಳ್ಳಿಯ ಎಂ.ಎಲ್.ಗಿರಿಧರ ಇವರ ಪುತ್ರಿ ನಂದಿತಾ ಜಿ.ಆರ್ ಇವರು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಕೀರ್ತಿ ತಂದಿದ್ದಾರೆ.

- Advertisement - 

ಹಿರಿಯೂರು ನಗರದ ನೆಹರೂ ಮೈದಾನದಲ್ಲಿರುವ ವಾಣಿ ವಿಲಾಸ ವಿದ್ಯಾ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿದ್ದ ಜಿ.ಆರ್.ನಂದಿತಾ ಅವರು 625 ಅಂಕಗಳಿಗೆ 603 ಅಂಕಗಳನ್ನು ಪಡೆಯುವ ಮೂಲಕ ಡಿಸ್ಟಿಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.

- Advertisement - 

ಕನ್ನಡ ಪತ್ರಿಕೆಯಲ್ಲಿ 125, ಹಿಂದಿ-100 ಪತ್ರಿಕೆಯಲ್ಲಿ ನೂರಕ್ಕೆ ನೂರು ಅಂಕಗಳನ್ನು  ಪಡೆದಿದ್ದಾರೆ. ಇಂಗ್ಲೀಷ್-84, ಗಣಿತ-98, ವಿಜ್ಞಾನ-98, ಸಮಾಜ ವಿಜ್ಞಾನ-98 ಅಂಕಗಳನ್ನು ಪಡೆದಿದ್ದಾರೆ.

ಚಂದ್ರವಳ್ಳಿ ಪ್ರಾದೇಶಿಕ ದಿನ ಪತ್ರಿಕೆಯ ಹಿರಿಯೂರು ತಾಲೂಕಿನ ಪ್ರತಿನಿಧಿ ಮತ್ತು ವರದಿಗಾರರಾದ ಎಂ.ಎಲ್.ಗಿರಿಧರ ಮತ್ತು ರೂಪಾ ಅವರ ಪುತ್ರಿ ನಂದಿತಾ ಅವರ ಸಾಧನೆಗೆ ಚಂದ್ರವಳ್ಳಿ ಪತ್ರಿಕೆ ವತಿಯಿಂದ ನಗದು ಬಹುಮಾನದೊಂದಿಗೆ ಅಭಿನಂದನೆಗಳನ್ನು ಸಲ್ಲಿಸಿದೆ.

- Advertisement - 

Share This Article
error: Content is protected !!
";