ಗಾಯಕ ಸೋನು ನಿಗಮ್‌ಗೆ ಧಿಕ್ಕಾರ ಎಂದು ಜೆಡಿಎಸ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ಭಾಷಾಭಿಮಾನವನ್ನು ಅವಮಾನಿಸಿದ ಗಾಯಕ ಸೋನು ನಿಗಮ್‌ನಿಮಗೆ ಧಿಕ್ಕಾರವಿರಲಿ ಎಂದು ಜೆಡಿಎಸ್ ಎಚ್ಚರಿಸಿದೆ.

- Advertisement - 

ಕನ್ನಡ ಹಾಡು ಹಾಡಿ ಎಂದು ಕೇಳಿದ್ದಕ್ಕೆ, ಕನ್ನಡದ ಮೇಲಿನ ನಮ್ಮ ಅಭಿಮಾನವನ್ನು “ಪಹಲ್ಗಾಮ್ ಉಗ್ರರ” ದಾಳಿಗೆ ಹೋಲಿಕೆ ಮಾಡಿದ್ದು ಖಂಡನೀಯ. ಇದನ್ನು ಕನ್ನಡಿಗರು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.

- Advertisement - 

ಕನ್ನಡಾಭಿಮಾನವನ್ನು ಪಹಲ್ಗಾಮ್‌ಘಟನೆಗೆ ಕಲ್ಪಿಸಿದ ನಿಮ್ಮದು ಉಗ್ರಗಾಮಿ ಮನಸ್ಥಿತಿ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡದ ಹಾಡನ್ನು ಹಾಡುವಂತೆ ಕೇಳಿದರೇ ಅದು ತಪ್ಪೇ ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.

ಸೋನು ನಿಗಮ್‌ನೀವು ಕನ್ನಡ ಭಾಷೆಯಲ್ಲಿ ಹಾಡು ಹಾಡಿದ್ದಕ್ಕೆ ಕರ್ನಾಟಕದಲ್ಲಿ ಮನೆ ಮಾತಾಗಿದ್ದೀರಿ, ಪ್ರಖ್ಯಾತಿಯನ್ನು ಪಡೆದಿದ್ದು ಎಂಬುದನ್ನು ಮರೆತುಬಿಟ್ಟಿರಾ ? ಕೋಟ್ಯಂತರ ಕನ್ನಡಿಗರು, ಅಭಿಮಾನಿಗಳು ನಿಮ್ಮನ್ನು ಆರಾಧಿಸುತ್ತಾ ಪ್ರೀತಿ ಕೊಟ್ಟಿದ್ದಾರೆ. ಆದರೆ ನೀವು ಕನ್ನಡದ ಮನಸ್ಸುಗಳನ್ನು, ಅಭಿಮಾನಿಗಳನ್ನು ಅವಮಾನಿಸಿ, ನೋಯಿಸಿದ್ದೀರಿ, ಅವರ ನಂಬಿಕೆ ಮತ್ತು ವಿಶ್ವಾಸಕ್ಕೆ ದ್ರೋಹ ಬಗೆದಿದ್ದೀರಿ.

- Advertisement - 

ಕನ್ನಡವನ್ನು ಪಹಲ್ಗಾಮ್‌ಘಟನೆಗೆ ಸಂಬಂಧ ಕಲ್ಪಿಸಿ, ಕನ್ನಡಿಗರನ್ನ ಕೆಣಕಿರುವ ಸೋನು ನಿಗಮ್‌ಕನ್ನಡಿಗರ ಕ್ಷಮೆ ಕೇಳಲೇಬೇಕು ಎಂದು ಜೆಡಿಎಸ್ ಆಗ್ರಹ ಮಾಡಿದೆ.

 

Share This Article
error: Content is protected !!
";