ಬಿರುಗಾಳಿಗೆ ಮರದ ಕೊಂಬೆ ಮುರಿದು ವ್ಯಕ್ತಿ ಸಾವು

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ
  ಮೇಡಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ಬಿರುಸಾಗಿ ಬೀಸಿದ ಬಿರುಗಾಳಿಗೆ ಸುಮಾರು 500-600 ವರ್ಷದ ಅರಳಿಮರದ ಕೊಂಬೆ ಅಂಗಡಿ ಬಳಿ ಕುಳಿತಿದ್ದ ವ್ಯಕ್ತಿ ಮೇಲೆ ಬಿದ್ದಿದ್ದು ಗಾಯಾಳು ವ್ಯಕ್ತಿಯನ್ನು ಆಸ್ಪತ್ರೆಗೆ ರವಾನಿಸುವಾಗ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ.
ಮೇಡಿಹಳ್ಳಿ ನಿವಾಸಿ ವೆಂಕಟರಮಣಪ್ಪ (
56)‌ಮೃತ ದುರ್ದೈವಿ. ಅರಳಿಮರದ ಕೆಳಗೆ ಪೆಟ್ಟಿಅಂಗಡಿ ಇಡಲಾಗಿದೆ.

- Advertisement - 

 ಎಂದಿನಂತೆ ಅಂಗಡಿ ಬಳಿ ಬಂದು ವೆಂಕಟರಮಣಪ್ಪ ಕುಳಿತಿಕೊಳ್ಳುತ್ತಿದ್ದ. ದುರದೃಷ್ಟ ಎನ್ನುವಂತೆ ಇಂದು ಬೀಸಿದ ಬಿರುಗಾಳಿಗೆ ಒಣಗಿದ್ದ ಅರಳಿಮರದ‌ಕೊಂಬೆ ವ್ಯಕ್ತಿ ಮೇಲೆ ಬಿದ್ದಿದೆ. ಪೆಟ್ಟಿ ಅಂಗಡಿ ಒಳಗೆ ವ್ಯಾಪಾರ ಮಾಡುತ್ತಿದ್ದ ಮಹಿಳೆ‌ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

- Advertisement - 

ಗ್ರಾಮದಲ್ಲಿರುವ ಒಣಗಿರುವ ಮರಗಳನ್ನು ತೆರವು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕಂಟನಕುಂಟೆ ಗ್ರಾಮ ಪಂಚಾಯಿತಿಗೆ ತಿಳಿಸಿಲಾಗಿತ್ತು. ಆದರೆ ನಮ್ಮ ಮನವಿಗೆ ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬುದೆ ಈ ಸಾವಿಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ಸಂಬಂದ ಪಟ್ಟ ಅಧಿಕಾರಿಗಳ ಮೇಲೆ ಆರೋಪಿಸಿದ್ದಾರೆ.

 

- Advertisement - 

 

 

Share This Article
error: Content is protected !!
";