ವಸತಿ ಶಾಲೆಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
2025-26
ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಕೆಜಿಬಿವಿ, ಕೆಕೆಜಿಬಿವಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಆವಾಸೀಯ ವಿದ್ಯಾಲಯ ವಸತಿ ಶಾಲೆ / ನಿಲಯಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಗೆ ಆನ್‍ಲೈನ್ ಮತ್ತು ಆಫ್‍ಲೈನ್ ಮೂಲಕ ದಾಖಲಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

- Advertisement - 

ಅರ್ಜಿ ಸ್ವೀಕರಿಸುವ ಪ್ರಕ್ರಿಯೆಯನ್ನು 2025 ಮೇ 02 ರಿಂದ 20 ರವರೆಗೆ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ನಿಗದಿಪಡಿಸಿದ್ದು, ಪ್ರವೇಶಾತಿ ಬಯಸುವ ತರಗತಿಗಳಿಗೆ ಆಯಾ ವಸತಿ ಶಾಲೆಗಳಲ್ಲಿ ಆಪ್‍ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

- Advertisement - 

ಆಸಕ್ತ ವಿದ್ಯಾರ್ಥಿಗಳು ಸಮಗ್ರ ಶಿಕ್ಷಣ ಕರ್ನಾಟಕದ ವಿದ್ಯಾವಾಹಿನಿ ತಂತ್ರಾಂಶದ ಆನ್‍ಲೈನ್ ಲಿಂಕ್ https://vidyavahini.karnataka.gov.in ಅಥವಾ ಆಪ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರಾದ ಕೂರ್ಮಾ ರಾವ್ ಮಿಟ್ಟಿರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement - 

Share This Article
error: Content is protected !!
";