ಆಪರೇಷನ್ ಸಿಂಧೂರ ಶ್ಲಾಘಿಸಿ ಪತ್ರ ಬರೆದ ಮಾಜಿ ಪ್ರಧಾನಿ ದೇವೇಗೌಡರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತದ ಪ್ರಬುದ್ಧ ಮತ್ತು ಸಂಯಮದ ಮಿಲಿಟರಿ ಕಾರ್ಯಾಚರಣೆ “ಆಪರೇಷನ್ ಸಿಂಧೂರ”ವನ್ನು ಶ್ಲಾಘಿಸಿ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇರೌಡರು ಮೆಚ್ಚುಗೆಯ ಪತ್ರ ಬರೆದಿದ್ದಾರೆಂದು ಜೆಡಿಎಸ್ ತಿಳಿಸಿದೆ.

- Advertisement - 

ಭಯೋತ್ಪಾದನೆಯ ಅಧರ್ಮದವಿರುದ್ಧ ನಾವು ಈ ಧರ್ಮದ ಯುದ್ಧವನ್ನು ನಡೆಸುತ್ತಿರುವಾಗ ದೇವರು ನಿಮ್ಮೊಂದಿಗೆ ಹಾಗೂ ನಮ್ಮ ರಾಷ್ಟ್ರದೊಂದಿಗೆ ಇರಲಿ ಎಂದು ಗೌಡರು ಪ್ರಾರ್ಥಿಸಿದ್ದಾರೆ.

- Advertisement - 

ಭಾರತವು ಶಾಂತಿಪ್ರಿಯ ದೇಶ. ಆದರೆ ಯಾರಾದರೂ ಅದನ್ನು ನಮ್ಮ ದೌರ್ಬಲ್ಯವೆಂದು ಭಾವಿಸಿದರೆ, ಅದಕ್ಕೆ ತಕ್ಕ ಉತ್ತರ ನೀಡಲು ನಾವು ಸಮರ್ಥರಾಗಿದ್ದೇವೆಂದು ಅವರಿಗೆ ಈಗ ತಿಳಿದಿದೆ.

- Advertisement - 

ನಾವು ಒಂದು ರಾಷ್ಟ್ರವಾಗಿ ಒಗ್ಗಟ್ಟಿನಿಂದ ನಿಮ್ಮೊಂದಿಗೆ ಇರುತ್ತೇವೆ ಎಂದು ಬೆಂಬಲ ಸೂಚಿಸಿ, ಅಭಿನಂದನೆ ವ್ಯಕ್ತಪಡಿಸಿ ದೇವೇಗೌಡರು ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

 

Share This Article
error: Content is protected !!
";