ಚಿತ್ರದುರ್ಗ ನಗರಸಭೆ: ಮೇ.10 ರಿಂದ 12 ರವರೆಗೆ ಬಿ ಖಾತಾ ಅಭಿಯಾನ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರಸಭೆ ವತಿಯಿಂದ ಇದೇ ಮೇ.10 ರಿಂದ 12 ರವರೆಗೆ ನಗರದ ಚೋಳಗುಡ್ಡ ಹಾಗೂ ಮಹೇಶ್ವರಿ ಲೇಔಟ್ನಲ್ಲಿ ಬಿ ಖಾತಾ ಅಭಿಯಾನ ನಡೆಯಲಿದೆ.

- Advertisement - 

ನಗರದ ಅಗಸನಕಲ್ಲು, ಚೋಳಗುಡ್ಡ ಜನರಿಗೆ ಅನುಕೂಲವಾಗಲು ಅಗಸನಕಲ್ಲು ಅಂಜುಮಾನ್ ಬಳಿ ಹಾಗೂ ಮಹೇಶ್ವರಿ ಲೇಔಟ್ ಶನಿಮಹಾತ್ಮ ದೇವಸ್ಥಾನದ ಬಳಿ ಮೇ.10 ರಿಂದ 12 ರವರೆಗೆ ಮೂರು ದಿನ ಅಂದೋಲನ ಮಾಡುತ್ತಿದ್ದು,

- Advertisement - 

ಸಾರ್ವಜನಿಕರು ಅಲ್ಲೇ ಬಂದು ಅರ್ಜಿಗಳನ್ನು ನೀಡಿ, ಬಿ ಖಾತಾವನ್ನು ಪಡೆಯಬಹುದಾಗಿದೆ. ಸಾರ್ವಜನಿಕರು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.

 

- Advertisement - 

Share This Article
error: Content is protected !!
";