SSLC ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ನಂದಿತಾಗೆ ಚೆಕ್ ವಿತರಣೆ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರ ಮತ್ತು ತಾಲೂಕಿನ ಚಂದ್ರವಳ್ಳಿ ಪತ್ರಿಕೆ ವಿತರಕರು ಮತ್ತು ವರದಿಗಾರರಾದ ಮಲ್ಲಪ್ಪನಹಳ್ಳಿಯ ಎಂ.ಎಲ್.ಗಿರಿಧರ ಇವರ ಪುತ್ರಿ ನಂದಿತಾ ಜಿ.ಆರ್ ಇವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಡಿಸ್ಟಿಕ್ಷನ್ ನಲ್ಲಿ ಉತ್ತೀರ್ಣರಾಗುವ ಮೂಲಕ ಕೀರ್ತಿ ತಂದಿದ್ದಾರೆ.

- Advertisement - 

ಚಂದ್ರವಳ್ಳಿ ಪ್ರಾದೇಶಿಕ ದಿನ ಪತ್ರಿಕೆಯ ಪ್ರತಿನಿಧಿ ಮತ್ತು ಹಿರಿಯೂರು ವರದಿಗಾರರಾದ ಎಂ.ಎಲ್.ಗಿರಿಧರ ಮತ್ತು ರೂಪಾ ಅವರ ಪುತ್ರಿ ನಂದಿತಾ ಅವರ ಸಾಧನೆಗೆ ಚಂದ್ರವಳ್ಳಿ ಪತ್ರಿಕೆ ವತಿಯಿಂದ ಎರಡು ಸಾವಿರ ರೂ. ಚೆಕ್ ನೀಡಿ ಅಭಿನಂದನೆ ಸಲ್ಲಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಶುಭಕೋರಲಾಯಿತು.

- Advertisement - 

ಈ ಸಂದರ್ಭದಲ್ಲಿ ಚಂದ್ರವಳ್ಳಿ ಪ್ರಾದೇಶಿಕ ದಿನ ಪತ್ರಿಕೆ ಸಂಪಾದಕರಾದ ಹರಿಯಬ್ಬೆ ಸಿ.ಹೆಂಜಾರಪ್ಪ, ಶ್ರೀಮತಿ ಅನಿತ ಎನ್.ಕೆ, ವರದಿಗಾರರಾದ ಮಲ್ಲಪ್ಪನಹಳ್ಳಿಯ ಎಂ.ಎಲ್.ಗಿರಿಧರ ಉಪಸ್ಥಿತರಿದ್ದರು.

 

- Advertisement - 

 

Share This Article
error: Content is protected !!
";