ಬುರುಜನರೊಪ್ಪ ಗ್ರಾಪಂ ಅಧ್ಯಕ್ಷೆ ರಾಧಮ್ಮ, ಉಪಾಧ್ಯಕ್ಷೆ ಜ್ಯೋತಿ ವಿರುದ್ಧದ ಅವಿಶ್ವಾಸಕ್ಕೆ ಜಯ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕು ಬುರುಜನರೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಮ್ಮ ಜಿ. ಉಪಾಧ್ಯಕ್ಷೆ ಹೆಚ್.ಜ್ಯೋತಿ ಇವರುಗಳ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಲಾಯಿತು.

- Advertisement - 

ಬುರುಜನರೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ-ಉಪಾಧ್ಯಕ್ಷೆ ವಿರುದ್ದ ಅವಿಶ್ವಾಸ ನಿರ್ಣಯಕ್ಕಾಗಿ ನಿಗದಿತ ನಮೂನೆ-೧ ರಲ್ಲಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಕಾರಣ ಇತ್ತೀಚೆಗೆ ಕರೆಯಲಾಗಿದ್ದ ಸಭೆಯಲ್ಲಿ

- Advertisement - 

ಒಟ್ಟು ೧೯ ಸದಸ್ಯರ ಪೈಕಿ ಹದಿಮೂರು ಸದಸ್ಯರುಗಳು ಕೈ ಎತ್ತುವ ಮೂಲಕ ರಾಧಮ್ಮ ಹಾಗೂ ಹೆಚ್.ಜ್ಯೋತಿ ಇವರುಗಳ ವಿರುದ್ದ ಮತ ಚಲಾಯಿಸಿದ್ದರಿಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ನಿಯಮಗಳು ೧೯೯೪ ರ ೩(೯) ರನ್ವಯ ಬರುಜನರೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರನ್ನು ಅಧಿಕಾರದಿಂದ ಕೆಳಗಿಳಿಸಲಾಗಿದೆ.

 

- Advertisement - 

 

Share This Article
error: Content is protected !!
";