ಪಾಕಿಸ್ತಾನಕ್ಕೆ ನುಗ್ಗಿ ಉಗ್ರಗಾಮಿ ನೆಲೆಗಳನ್ನು ಮಣ್ಣು ಮುಕ್ಕಿಸಿದ ಕೀರ್ತಿ ನಮ್ಮ ಸೇನೆಗಿದೆ

News Desk

ಚಂದ್ರವಳ್ಳಿ ನ್ಯೂಸ್, ಮೈಸೂರು:
ಪಹಲ್ಗಾಮ್ ಉಗ್ರರ ದಾಳಿಯ ನಂತರ ಆಪರೇಷನ್ ಸಿಂಧೂರ ಹೆಸರಿನಲ್ಲಿ ಭಾರತೀಯ ಸೇನೆ ಉಗ್ರರ
9 ಶಿಬಿರಗಳನ್ನು ಧ್ವಂಸ ಮಾಡಿದ್ದಲ್ಲದೆ ಪಾಕಿಸ್ತಾನಕ್ಕೆ ನುಗ್ಗಿ ಉಗ್ರಗಾಮಿ ನೆಲೆಗಳನ್ನು ಮಣ್ಣು ಮುಕ್ಕಿಸಿದೆ ಎಂದು ಮೈಸೂರು ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಹೇಳಿದರು.

- Advertisement - 

ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದ ಅವರು, ಭಾರತೀಯ ಸೇನೆಯ ದಾಳಿಯಲ್ಲಿ 100ಕ್ಕೂ ಹೆಚ್ಚಿನ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಸಂಸದರು ತಿಳಿಸಿದರು.

- Advertisement - 

ಪಾಕಿಸ್ತಾನ ಒಂದು ಮುಸ್ಲಿಂ ರಾಷ್ಟ್ರವಾದರೂ ಭಾರತದೊಂದಿಗೆ ಯುದ್ಧ ಮಾಡುವಾಗ ಇಸ್ಲಾಮಿಕ್ ರಾಷ್ಟ್ರಗಳ್ಯಾವೂ ಅದರ ಜೊತೆ ನಿಲ್ಲಲಿಲ್ಲ. ಭಯೋತ್ಪಾದನೆಯಿಂದ ಆ ರಾಷ್ಟ್ರಗಳು ಅಷ್ಟು ಬೇಸತ್ತಿವೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಹೇಳಿದರು.

 

- Advertisement - 

Share This Article
error: Content is protected !!
";