ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಯಶಸ್ವಿ ದಾಳಿ ನಡೆಸಿದ ಭಾರತ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆಪರೇಷನ್ ಸಿಂಧೂರದ ಮೂಲಕ ಭಾರತವು ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಯಶಸ್ವಿ ದಾಳಿ ನಡೆಸಿ
, ಉದ್ದೇಶಿತ ಗುರಿ ಸಾಧನೆಗೈದ ಕಾರ್ಯಶೈಲಿಗೆ ಜಾಗತಿಕ ರಕ್ಷಣಾ ವಿಶ್ಲೇಷಕರು ಶ್ಲಾಘಿಸಿದ್ದಾರೆ ಎಂದು ಬಿಜೆಪಿ ತಿಳಿಸಿದೆ‌.

- Advertisement - 

ಭಾರತವು ಪಾಕಿಸ್ತಾನದ ಉಗ್ರನೆಲೆಗಳು, ವಾಯುನೆಲೆ ಮತ್ತಿತರ ಕಡೆ ಯೋಜಿತ ದಾಳಿ ನಡೆಸಿತು. ಆದರೆ, ಪಾಕಿಸ್ತಾನಕ್ಕೆ ಭಾರತದ ಒಂದೇ ಒಂದು ನೆಲೆ ಮೇಲೆ ದಾಳಿ ನಡೆಸಲು ಆಗಲಿಲ್ಲ. ಇದು ಭಾರತಕ್ಕೆ ಸಿಕ್ಕ ಸ್ಪಷ್ಟ ಜಯ ಎಂದು ಜಾಗತಿಕ ಯುದ್ಧ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

- Advertisement - 

 ಪಾಕಿಸ್ತಾನದಲ್ಲಿನ ಯಾವುದೇ ಗುರಿ ಮೇಲೆ ದಾಳಿ ಮಾಡಬಲ್ಲ ಸಾಮರ್ಥ್ಯವನ್ನು ಭಾರತ ಪ್ರದರ್ಶಿಸಿತು. ಈ ಮೂಲಕ ಗಡಿಯಾಚೆಗಿನ ಭಯೋತ್ಪಾದನೆಗೆ ಹೊಸತೊಂದು ಎಚ್ಚರಿಕೆಯನ್ನು ರವಾನಿಸಿದೆ ಎಂದು ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ ಎಂದು ಬಿಜೆಪಿ ಹೇಳಿದೆ.

 

- Advertisement - 

Share This Article
error: Content is protected !!
";