ಜನರಿಗೆ ಶಕ್ತಿ ತುಂಬಲು ಕಂದಾಯ ಗ್ರಾಮಗಳಾಗಿ ಪರಿವರ್ತನೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಗತಿಯತ್ತ ಕರ್ನಾಟಕ – ಸಮರ್ಪಣೆ ಸಂಕಲ್ಪ! ರಾಜ್ಯ ಕಾಂಗ್ರೆಸ್ ಸರ್ಕಾರವು ಯಶಸ್ವಿ 2 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಆಯೋಜಿಸುತ್ತಿರುವ ಸಾಧನಾ ಸಮಾವೇಶದ ಸ್ಥಳ ಪರಿಶೀಲಿಸಿ, ಸುದ್ಧಿಗೋಷ್ಟಿ ನಡೆಸಿ, ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿದರು.

- Advertisement - 

ರಾಜ್ಯದ ಮಹಾಜನತೆ 2023ರ ಮೇ 13ರಂದು ಕಾಂಗ್ರೆಸ್‌ಸರ್ಕಾರದ ಮೇಲೆ ಅಪಾರವಾದ ನಂಬಿಕೆ, ವಿಶ್ವಾಸವನ್ನಿಟ್ಟು 136 ಸ್ಥಾನಗಳನ್ನು ನೀಡಿ ಪಕ್ಷವನ್ನು ಅಧಿಕಾರಕ್ಕೆ ತಂದು, ರಾಜ್ಯಕ್ಕೆ ದೊಡ್ಡ ಸಂದೇಶವನ್ನು ಕೊಟ್ಟಿದ್ದಾರೆ. ನಮ್ಮ ಸರ್ಕಾರಕ್ಕೆ ಇದೀಗ ಎರಡು ವರ್ಷದ ಸಂಭ್ರಮ. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ.

- Advertisement - 

ಎರಡು ವರ್ಷದ ಸಂಭ್ರಮದ ಜೊತೆಗೆ ಜನರಿಗೆ ಶಕ್ತಿಯನ್ನು ತುಂಬಲು ಕಂದಾಯ ಗ್ರಾಮಗಳಾಗಿ ಪರಿವರ್ತನೆಗೊಂಡಿರುವ ಹಾಡಿ, ಹಟ್ಟಿ, ತಾಂಡಾಗಳಲ್ಲಿನ ನಿವಾಸಿಗಳಿಗೆ 94 ಡಿಅಡಿ ಮೇ 20ರಂದು ಒಂದು ಲಕ್ಷ ಹಕ್ಕು ಪತ್ರಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿಂದೆಯೇ ನಾವು ಹಕ್ಕುಪತ್ರಗಳನ್ನು (ಪಟ್ಟಾಗಳನ್ನು) ನೀಡುವುದಾಗಿ ಘೋಷಿಸಿದ್ದೆವು. 1 ಲಕ್ಷ ಪಟ್ಟಾಗಳನ್ನು ನೀಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

 

- Advertisement - 

 

 

Share This Article
error: Content is protected !!
";