ಭಯೋತ್ಪಾದಕರನ್ನು “ಜೀ” ಎಂದು ಗೌರವಸುವ ಕಾಂಗ್ರೆಸ್

News Desk

ಭಯೋತ್ಪಾದಕರನ್ನು “ಜೀ” ಎಂದು ಗೌರವಸುವ ಕಾಂಗ್ರೆಸ್
ಚಂದ್ರವಳ್ಳಿ ನ್ಯೂಸ್, ಬೆಂಗಳೂರು: ಕಾಂಗ್ರೆಸ್‌ ಪಕ್ಷ ಎಲ್ಲ ಮಿತಿಯನ್ನೂ ಮೀರಿ ವರ್ತಿಸುತ್ತಿದೆ, ದೇಶವನ್ನೂ ಮೀರಿ ಚಿಂತಿಸುತ್ತಿದೆ. ಭಯೋತ್ಪಾದಕರನ್ನು “ಜೀ” ಎಂದು ಗೌರವ ಸೂಚಕವಾಗಿ ಸಂಬೋಧಿಸುವ ಭಾರತೀಯ ಕಾಂಗ್ರೆಸ್ ಪಕ್ಷದ ನಾಯಕರು ದೇಶದ ಸಂಸದರನ್ನು ಉಗ್ರರಿಗೆ ಹೋಲಿಸುತ್ತಿರುವುದು ಖಂಡನೀಯ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.

ದೇಶದ ಜನತೆ, ರಾಜಕೀಯ ಪಕ್ಷಗಳು ಒಂದಾಗಿ ದೇಶದೊಂದಿಗೆ ನಿಂತಿರುವುದೇ ಕಾಂಗ್ರೆಸ್‌ ನಾಯಕರ ಈ ಎಲ್ಲಾ ಆರೋಪಗಳಿಗೆ ಕಾರಣವಾಗಿದೆ. ಜಾಗತಿಕ ಮಟ್ಟದಲ್ಲಿ ಪಾಕಿಸ್ಥಾನದ ಮುಖವಾಡ ಕಳಚಲು ಭಾರತ ಸರ್ಕಾರ ನಿಯೋಜಿಸಿರುವ ನಿಯೋಗದ ಸಂಸದರು ವಿದೇಶದ ನೆಲದಲ್ಲಿ ನಿಂತು ಪಾಕಿಸ್ಥಾನ ಪ್ರೇರಿತ ಉಗ್ರವಾದದ ವಿರುದ್ಧ ಭಾರತದ ಕಾರ್ಯಾಚರಣೆಯನ್ನು ಮುಕ್ತಕಂಠದಿಂದ ಹೊಗಳುತ್ತಿರುವುದು ಕಾಂಗ್ರೆಸ್‌ ಪಕ್ಷಕ್ಕೆ ಸಹಿಸಿಕೊಳ್ಳಲಾಗುತ್ತಿಲ್ಲ.

- Advertisement - 

ಉಗ್ರರೊಂದಿಗೆ ಹಸ್ತಲಾಘವ ಮಾಡುವ, ಭಯೋತ್ಪಾದಕರನ್ನು ಅಮಾಯಕರೆಂದು ಬಿಂಬಿಸುವ ಕಾಂಗ್ರೆಸ್‌ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದರೆ ಕಾಂಗ್ರೆಸ್‌ ಒಪ್ಪಿಕೊಳ್ಳುತ್ತದೆಯೇ ಎಂಬುದನ್ನು ಕಾಂಗ್ರೆಸ್‌ ನಾಯಕ ಸ್ಪಷ್ಟಪಡಿಸಲಿ ಎಂದು ಬಿಜೆಪಿ ಆಗ್ರಹ ಮಾಡಿದೆ.

- Advertisement - 
Share This Article
error: Content is protected !!
";