ಗೃಹ ಸಚಿವ ಪರಮೇಶ್ವರ್ ಕೈಗಳನ್ನ ಕಟ್ಟಿ ಹಾಕಲಾಗಿದೆ

News Desk

ಚಂದ್ರವಳ್ಳಿ ನ್ಯೂಸ್, ಬೀದರ್:
ಕರಾವಳಿಯಾದ್ಯಂತ ಸೇರಿದಂತೆ ಮಂಗಳೂರಿನಲ್ಲಿ ಕೇವಲ ಹಿಂದೂ ಹಾಗೂ ಮುಸ್ಲಿಮರಷ್ಟೇ ಇಲ್ಲ
, ಎಲ್ಲ ಧರ್ಮದವರೂ ವಾಸವಾಗಿದ್ದಾರೆ. ಎಲ್ಲರೂ ಶಾಂತಿಯಿಂದ ಬದುಕುವುದು ಮುಖ್ಯ ಎಂದು ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅಭಿಪ್ರಾಯಪಟ್ಟರು.

ಬೀದರ್‌ನಲ್ಲಿ ಭಾನುವಾರ ಮಾತನಾಡಿದ ಸೋಮಣ್ಣ ಅವರು, ಗೃಹ ಸಚಿವ ಡಾ.ಜಿ ಪರಮೇಶ್ವರ್ ತುಂಬಾ ಒಳ್ಳೆಯವರು. ಹಿಂದಿನಿಂದಲೂ ಅವರ ಬಗ್ಗೆ ಗೊತ್ತಿದೆ. ಆದರೆ, ಅವರ ಕೈಗಳನ್ನು ಕಟ್ಟಿ ಹಾಕಲಾಗಿದೆ. ಅವರಿಗೆ ಏನೇನು ಒತ್ತಡಗಳಿದ್ದಾವೆಯೋ ಗೊತ್ತಿಲ್ಲ ಎಂದು ಸೋಮಣ್ಣ ತಿಳಿಸಿದರು.

- Advertisement - 

ಸೋಮಣ್ಣನವರ ಕೈ ಕಟ್ಟಿ ಹಾಕಿರುವುದರಿಂದಾಗಿ ಪರಿಸ್ಥಿತಿ ಹೀಗಾಗಿದೆ. ಕಾಂಗ್ರೆಸ್ ಪಕ್ಷದವರಿಗೆ ಆಡಳಿತ ಮಾಡಲು ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪರಮೇಶ್ವರ್ ರಾಜೀನಾಮೆ ನೀಡಬೇಕಾದ ಅಗತ್ಯವಿಲ್ಲ. ಅವರಿಗೆ ಸರಿಯಾಗಿ ಕೆಲಸ ಮಾಡಲು ಬಿಡಬೇಕು ಎಂದು ಸೋಮಣ್ಣ ತಾಕೀತು ಮಾಡಿದ್ದಾರೆ.

- Advertisement - 
Share This Article
error: Content is protected !!
";