ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕ್ಷೇತ್ರದ ಸರ್ವತೋಮುಖ ‌ಅಭಿವೃದ್ಧಿಗೆ ಪೂರಕವಾಗಿ
  7 ಕೋಟಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಗುಂಡಮಗೆರೆ ಗ್ರಾಮದಲ್ಲಿ ಸಿ.ಸಿ ರಸ್ತೆ ಅಭಿವೃದ್ಧಿ ಕಾಮಗಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಆರೋಡಿ ಆಸ್ಪತ್ರೆಯಲ್ಲಿ ಹೊಸ ಮೀಟಿಂಗ್ ಹಾಲ್ ನಿರ್ಮಾಣ, ಅಂಬೆಡ್ಕರ್ ಭವನ ನಿರ್ಮಾಣ ಭಕ್ತರಹಳ್ಳಿ, ಕಾಮನ ಅಗ್ರಹಾರ ಮೂಲಕವಾಗಿ ಚಿಕ್ಕಮಂಕನಾಳಕ್ಕೆ ತಲುಪುವ NH 207 | ವರೆಗೆ ರಸ್ತೆ ಅಭಿವೃದ್ಧಿಅಕ್ಕತಮ್ಮನಹಳ್ಳಿಯಿಂದ ಲಿಂಗಾಪುರ ರಸ್ತೆ ನಿರ್ವಹಣೆ, ಕೋಡಿಗೆಹಳ್ಳಿಯಿಂದ ಕನಕೇನಹಳ್ಳಿವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ, ಬೈರಸಂದ್ರಪಾಳ್ಯ ಸಿ.ಸಿ ರಸ್ತೆ ಅಭಿವೃದ್ಧಿ, ದೊಡ್ಡತುಮಕೂರು ಸಿ.ಸಿ ರಸ್ತೆ ಅಭಿವೃದ್ಧಿ,

- Advertisement - 

ಕರೀಂಸೊನಹಳ್ಳಿ ಕಾಲೋನಿಯ ಸಿ.ಸಿ ರಸ್ತೆ ಅಭಿವೃದ್ಧಿಅಂಜನ್ ಮೂರ್ತಿ ನಗರ ಕಾಲೋನಿಯಲ್ಲಿ ಸಿ.ಸಿ ರಸ್ತೆ ಅಭಿವೃದ್ಧಿ, ಕನಸವಾಡಿ ಗ್ರಾಮ ಪಂಚಾಯಿತಿಯ, ಮಾರಸಂದ್ರ ಕಾಲೋನಿ ಪರಿಮಿತಿಯಲ್ಲಿ ಸಿ.ಸಿ ರಸ್ತೆ  ಅಭಿವೃದ್ಧಿ ಕಾಮಗಾರಿಗಳಿಗೆ ಮಾನ್ಯ ಶಾಸಕರಾದ ದೀರಜ್ ಮುನಿರಾಜು ರವರು ಗುದ್ದಲಿ ಪೂಜೆ ನೆರವೇರಿಸಿದರು.

  ಈ ಸಂದರ್ಭದಲ್ಲಿ ಟಿವಿ ಲಕ್ಷ್ಮೀನಾರಾಯಣ್, ತಾಲೂಕು ಬಿಜೆಪಿ ಅಧ್ಯಕ್ಷರಾದ ನಾಗೇಶ್, ಅಶ್ವಥ್ ನಾರಾಯಣಸ್ವಾಮಿ, ಕಾಂತರಾಜು, ಗ್ರಾಮ್ ಪಂಚಾಯತಿ ಅಧ್ಯಕ್ಷರು ಸದಸ್ಯರು ಮುಖಂಡರು ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement - 

Share This Article
error: Content is protected !!
";