ವಿದ್ಯಾರ್ಥಿ ವೇತನ ಅಭಿಯಾನ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಮಾಜ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ಪೂರ್ವ ಹಾಗೂ ನಂತರ ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ ವಿತರಣೆಯಲ್ಲಿ ಶೇ.100 ಗುರಿ ಸಾಧಿಸುವ ಸಲುವಾಗಿ ಜೂ.10 ರಿಂದ ಜಿಲ್ಲೆಯಾದ್ಯಂತ ವಿದ್ಯಾರ್ಥಿ ವೇತನ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದೆ.  

ಅರ್ಹ ವಿದ್ಯಾರ್ಥಿಗಳು ಇಲಾಖೆಯಿಂದ ಅಭಿವೃದ್ಧಿ ಪಡಿಸಿರುವ  HMIS Portal ಮೂಲಕ ಅಂತರ್ ಜಾಲತಾಣ  www.sw.kar.nic.in  ಲಿಂಕ್ ಬಳಿಸಿ ಅರ್ಜಿ ಸಲ್ಲಿಸಬಹುದು.

- Advertisement - 

ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕ ಕಚೇರಿ ದೂರವಾಣಿ ಸಂಖ್ಯೆ 9480843029 ಹಾಗೂ ಸಹಾಯಕ ನಿರ್ದೇಶಕರ ಕಚೇರಿಗಳಾದ ಚಳ್ಳಕೆರೆ 9480843106, ಚಿತ್ರದುರ್ಗ 9480843107, ಹಿರಿಯೂರು 9480843108, ಹೊಳಲ್ಕೆರೆ 9480843109, ಹೊಸದುರ್ಗ 9480843110, ಮೊಳಕಾಲ್ಮೂರು 9480843111 ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

 

- Advertisement - 

Share This Article
error: Content is protected !!
";