ಕುಡಿಯುವ ನೀರು ನೀಡಲು ಆಗದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಇದ್ದಾರೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಪ್ರತಿ ಗಲ್ಲಿ ಗಲ್ಲಿಯಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಜನರಿಗೆ ಮೂಲಭೂತ ಅನಿವಾರ್ಯವಾದ ಶುದ್ಧ ಕುಡಿಯುವ ನೀರು ನೀಡಲು ಆಗದಿರುವಂತಹ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರವಿದೆ ಎಂದು ಬಿಜೆಪಿ ಆರೋಪಿಸಿದೆ.

ನೆರೆಯ ತಮಿಳುನಾಡು, ತೆಲಂಗಾಣಕ್ಕೆ ಕದ್ದುಮುಚ್ಚಿ ನೀರು ಬಿಡುವ ರಾಜ್ಯ ಕರ್ನಾಟಕ ಕಾಂಗ್ರೆಸ್ ಸರ್ಕಾರ ರಾಜಧಾನಿಯ ಜನತೆಗೆ ಮಾತ್ರ ಖಾಲಿ ಚೊಂಬು ನೀಡಿದೆ. ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಸಿ ರಾಜಧಾನಿ ಬೆಂಗಳೂರಿನಲ್ಲಿ ಟ್ಯಾಂಕರ್‌ ನೀರಿನ ಮಾಫಿಯಾಗೆ ನಾಂದಿ ಹಾಡಿದೆ. 60% ಜನರಿಗೆ ಮಾತ್ರ ಶುದ್ಧ ಕಾವೇರಿ ನೀರು ದೊರೆಯುತ್ತಿದೆ.

- Advertisement - 

ಗ್ರೇಟರ್ ಬೆಂಗಳೂರು ಎನ್ನುತ್ತಾ ಭೂ ಮಾಫಿಯಾಕ್ಕೆ ಕೈ ಹಾಕಿರುವ ಮಾನ್ಯ ಡಿ.ಕೆ ಶಿವಕುಮಾರ ಅವರೇ, ಬೆಂಗಳೂರಿನ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸಲು ಸಾಧ್ಯವಾಗಿಲ್ಲ ಎಂದ ಮೇಲೆ ನೀವು ಸಚಿವರಾಗಿ ಮುಂದುವರೆಯುವುದೇಕೆ? ಎಂದು ಬಿಜೆಪಿ ಖಾರವಾಗಿ ಪ್ರಶ್ನಿಸಿದೆ.

 

- Advertisement - 

 

 

Share This Article
error: Content is protected !!
";