ಡಿಕೆಶಿ ವಿರುದ್ಧ ಕೆಂಡವಾದ ಹೆಚ್ ಡಿಕೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
2028ರಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲ್ಲ ಹಾಗೇನಾದರೂ ಆದರೆ ನಾನೇ ಅವರಿಗೆ ಬಟ್ಟೆ ಹೊಲಿಸಿ ಕೊಡ್ತೀನಿ ಅಂತ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿರುವುದಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದಾರೆ.

ಈ ಕುರಿತು ಜೆಪಿನಗರದ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಅವರ(ಡಿಕೆಶಿ) ಪಾಪದ ಹಣದಿಂದ ಯಾರಿಗೆ ಬೇಕಿದೆ ಬಟ್ಟೆ? ಅವರಿಂದ ಬಟ್ಟೆ ಹೊಲಿಸಿಕೊಳ್ಳುವ ದಾರದ್ರ್ಯ ತನಗೆ ಬಂದಿಲ್ಲ, ನನಗೆ ಬಟ್ಟೆ ಬೇಕಾದರೆ ನಾಡಿನ ಜನತೆ ತಮಗೆ ಬಟ್ಟೆ ಕೊಡುತ್ತಾರೆ ಎಂದು ಟಾಂಗ್ ನೀಡಿದರು.

- Advertisement - 

ಅವರಿಗೆ(ಡಿಕೆಶಿ) ದಾರಿದ್ರ್ಯ ಬಂದೊದಗಿದೆ, ಅವರಲ್ಲಿರೋದು ಪಾಪದ ಹಣ, ಅದರಿಂದ ಬಟ್ಟೆ ಹೊಲಿಸಿಕೊಳ್ಳುವ ಸ್ಥಿತಿ ರಾಜ್ಯದ ಜನ ತನಗೆ ನೀಡಿಲ್ಲ. ಜನರ ದುಡ್ಡನ್ನ ಲೂಟಿ ಮಾಡಿ ಸಂಪಾದನೆ ಮಾಡ್ತಿರೋ ಪಾಪದ ಹಣ ಅದು ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.

2028ಕ್ಕೆ ಜೆಡಿಎಸ್-ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದ ಡಿಕೆ ಶಿವಕುಮಾರ್‌ ಕುಮಾರಸ್ವಾಮಿಗೆ ಹೊಸ ಜುಬ್ಬಾ ಪಂಚೆ ಕೊಡಿಸುತ್ತೇನೆ ಎಂದು ಹೇಳಿದ್ದನ್ನ ಸ್ಮರಿಸಬಹುದು.

- Advertisement - 

 

Share This Article
error: Content is protected !!
";