ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇದನ್ನೂ ನಾವು ಖಂಡಿಸುತ್ತೇವೆ, ನಾವು ಯಾವುದೇ ಮತಾಂತರ ಮಾಡುತ್ತಿಲ್ಲ ಎಂದು ಕ್ರಿಶ್ಚಿಯನ್ ಸಮುದಾಯದ ಮುಖಂಡರು ಸ್ಪಷ್ಟಪಡಿಸಿದರು.
ನಗರದ ಪತ್ರಕರ್ತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮುಖಂಡರು, ನಮ್ಮ ಚರ್ಚೆಗೆ ಜನರು ಒಳ್ಳೆಯ ಸಂದೇಶ ಹಾಗೂ ಉದ್ದೇಶದಿಂದ ಬರುತ್ತಾರೆ. ಚರ್ಚ್ ನಲ್ಲಿ ಯುವಕರು ಪ್ರಾರ್ಥನೆ ಮಾಡುವ ಸಮಯದಲ್ಲಿ ಮತಾಂತರ ಮಾಡುತ್ತಿದ್ದಾರೆ ಎಂದು ಯಾರೋ ನೀಡಿದ ದೂರಿನ ಮೇಲೆ ಚರ್ಚ್ ಗೆ ಪೊಲೀಸರು ಬಂದು ಯುಕರನನ್ನು ಕರೆದುಕೊಂಡು ಹೋಗಿದ್ದಾರೆ. ಇದರಲ್ಲಿ ಒಬ್ಬ ಯುವಕ ವಿದ್ಯಾರ್ಥಿಯಾಗಿದ್ದು ನಾವು ಹೋಗಿ ನಾಳೆ ಎಕ್ಸಾಮ್ ಇದೇ ಬಿಡಿ ಅಂದರು ಪೊಲೀಸರು ಬಿಡಲಿಲ್ಲ ಎಂದು ಅವರು ದೂರಿದರು.
ಯುವಕರು ವಿದ್ಯಾರ್ಥಿಗಳಾಗಿದ್ದು ಅವರಿಗೆ ಬಿಡಿ ಎಂದು ಮನವಿ ಮಾಡಿದರು, ಅವರು ಬಿಡುತ್ತೇವೆ ಎಂದು ಹೇಳಿ ಬೆಳಿಗ್ಗೆ ತನಕ ಪೊಲೀಸ್ ಠಾಣೆಯಲ್ಲೇ ಇಟ್ಟಿದ್ದರು.
ಪೊಲೀಸರು ವಿದ್ಯಾರ್ಥಿಯ ಭವಿಷ್ಯ ಹಾಳು ಮಾಡಿದ್ದಾರೆ. ಪೊಲೀಸ್ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮುಖಂಡರು ಆಗ್ರಹ ಮಾಡಿದರು. ಮತಾಂತರ ಕುರಿತು ಕ್ರಿಶ್ಚಿಯನ್ ಸಮುದಾಯದ ಮೇಲೆ ನಿರಂತರ ಆರೋಪಗಳು ಬರುತ್ತಿವೆ. ಸಮುದಾಯದ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದೆ. ಅಲ್ಪಸಂಖ್ಯಾತರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ನಿರ್ದೇಶಕ ಪ್ರಶಾಂತ ಜಾತ್ತಣ್ಣ, ರಾಜ್ಯ ಉಪಾಧ್ಯಕ್ಷ ಡಾ.ಪ್ರದೀಪ್ ಡಮೆಲ್ಲೋ ಇತರರು ಸುದ್ದಿಗೊಷ್ಟಿಯಲ್ಲಿ ಇದ್ದರು.

