ಯೋಗಾಭ್ಯಾಸವನ್ನು ದೈನಂದಿನ ಜೀವನ ಶೈಲಿಯನ್ನಾಗಿ ರೂಢಿಸಿಕೊಳ್ಳೋಣ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರತಿಯೊಬ್ಬ ನಾಗರಿಕನು ದೈಹಿಕ ಚೈತನ್ಯ, ಮಾನಸಿಕ ಸ್ಪಷ್ಟತೆ ಮತ್ತು ಶಾಂತಿಗೆ ಶಾಶ್ವತ ಮಾರ್ಗವಾದ ಯೋಗದ ಜ್ಞಾನವನ್ನು ಅಳವಡಿಸಿಕೊಳ್ಳಬೇಕೆಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ ಕುಮಾರಸ್ವಾಮಿ ಮನವಿ ಮಾಡಿದರು.

ತಮಿಳುನಾಡಿನ ಸೇಲಂ ಉಕ್ಕು ಸ್ಥಾವರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

- Advertisement - 

ಭಾರತೀಯ ಪ್ರಾಚೀನ ಪರಂಪರೆಯಾದ ಯೋಗವನ್ನು ಜಾಗತಿಕ ಮಟ್ಟದಲ್ಲಿ ಪಸರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವಕ್ಕೆ ಕುಮಾರಸ್ವಾಮಿ ಅವರು ಧನ್ಯವಾದಗಳನ್ನು ಅರ್ಪಿಸಿದರು.

ಯೋಗವು ಯೋಗಕ್ಷೇಮ, ಸಾಮರಸ್ಯ ಮತ್ತು ಸಮಗ್ರ, ಸಶಕ್ತ, ಸದೃಢ ಜೀವನದ ಶಕ್ತಿಯಾಗಿದೆ. ನಮ್ಮೆಲ್ಲರ ಆರೋಗ್ಯಕರ ಜೀವನಕ್ಕೆ ಹಾಗೂ ಸ್ವಾಸ್ತ್ಯ ಭಾರತ ನಿರ್ಮಾಣಕ್ಕಾಗಿ ಯೋಗಾಭ್ಯಾಸವನ್ನು ದೈನಂದಿನ ಜೀವನಶೈಲಿಯನ್ನಾಗಿ ರೂಢಿಸಿಕೊಳ್ಳೋಣ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ತಿಳಿಸಿದರು.

- Advertisement - 

 

Share This Article
error: Content is protected !!
";