ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಅದಕ್ಷ ಕರ್ನಾಟಕ ಕಾಂಗ್ರೆಸ್ ಆಡಳಿತದಲ್ಲಿ ಕಮಿಷನ್ ಇಲ್ಲದೇ ಯಾವುದೇ ಫೈಲ್‌ಗಳು ಟೇಬಲ್ ಬಿಟ್ಟು ಮುಂದೆ ಹೋಗುವುದಿಲ್ಲ ! ಎಂದು ಜೆಡಿಎಸ್ ಆರೋಪ ಮಾಡಿದೆ.
ಇದಕ್ಕೆ ಮತ್ತೊಂದು ಸಾಕ್ಷಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ನಿರ್ವಹಿಸುತ್ತಿರುವ ವಸತಿ ಇಲಾಖೆಯಲ್ಲಿ ಹಣ ಕೊಟ್ಟರಷ್ಟೇ ಮನೆ ಮಂಜೂರು ಮಾಡುತ್ತಾರೆ ಎಂದು ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರ ಗಂಭೀರ ಆರೋಪ ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಸಿದ್ದರಾಮಯ್ಯನವರ ಇಡೀ ಮಂತ್ರಿಮಂಡಲವೇ ಕಮಿಷನ್ ದಂಧೆಯಲ್ಲಿ ತೊಡಗಿದೆ ಎಂಬುದು ಹಲವು ಹಗರಣಗಳಿಂದ ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇಂತಹ ಭ್ರಷ್ಟ, ಲಂಚಬಾಕ, ಲಜ್ಜೆಗೆಟ್ಟ, ಜನವಿರೋಧಿ ಕಾಂಗ್ರೆಸ್ ಸರ್ಕಾರ ತೊಲಗಿದರಷ್ಟೇ ರಾಜ್ಯದ ಜನರಿಗೆ ನೆಮ್ಮದಿ ಎಂದು ಜೆಡಿಎಸ್ ಹೇಳಿದೆ.

