ಹಣ ಪಡೆದಿದ್ದು ಸಾಬೀತು ಆದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ-ಜಮೀರ್

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಸತಿ ಯೋಜನೆ ಅಡಿ ಹಣ ಪಡೆದು ನಾನು ಮನೆಗಳನ್ನು ನೀಡಿ ಭ್ರಷ್ಟಾಚಾರ ಎಸಗಿದ್ದರೆ ನೂರಕ್ಕೆ ನೂರರಷ್ಟು ರಾಜೀನಾಮೆ ನೀಡುತ್ತೇನೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಘೋಷಿಸಿದರು.

ಬೆಂಗಳೂರಿನ ಅವರ ಸರ್ಕಾರಿ ನಿವಾಸದ ಬಳಿ ಮಾತನಾಡಿ, ಶಾಸಕ ಬಿ.ಆರ್.ಪಾಟೀಲ್ ನನ್ನ ‌ಮೇಲೆ ಆರೋಪ ಮಾಡಿಲ್ಲ. ನಾನು‌ ಕೊಟ್ಟ ಪತ್ರಕ್ಕೆ ಮನೆ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಪಂಚಾಯತಿ ಮೇಲೆ ಆರೋಪ‌ ಮಾಡಿದ್ದಾರೆ. ಪ್ರತಿ ಪಂಚಾಯತಿಗೆ 900 ಮನೆ ನೀಡಲಾಗಿದೆ. ಎರಡು ಸಾವಿರ ಮನೆ ಕೇಳಿದ್ರೆ 900 ಮನೆ ನೀಡಲಾಗಿದೆ. ಶಾಸಕರು ಕೊಟ್ಟ ಮನವಿ ನಮ್ಮ ಬಳಿ ಇವೆ. ಬಿ.ಆರ್.ಪಾಟೀಲ್ ಹಿರಿಯರಿದ್ದಾರೆ. ಯಾಕೆ ಆರೋಪ ಮಾಡಿದ್ರೋ ಗೊತ್ತಿಲ್ಲ ಎಂದು ಸಚಿವ ಜಮೀರ್ ತಿಳಿಸಿದರು.

- Advertisement - 

ಬಿಜೆಪಿಗರು ಹೇಳುವುದೇ ಬೇಡ ನಾನೇ ರಾಜೀನಾಮೆ ‌ನೀಡುತ್ತೇನೆ. ಯಾರ ಬಳಿಯೂ ನಾವು ದುಡ್ಡು ಪಡೆದು ಮನೆ ಕೊಟ್ಟಿಲ್ಲ. ರಾಮನಗರಕ್ಕೆ ಕೂಡ ಮನೆ ಕೊಟ್ಟಿದ್ದೇವೆ. ಎಲ್ಲರಿಗೂ ಮನೆ ಕೊಟ್ಟಿದ್ದೇವೆ. ದುಡ್ಡು ಪಡೆದು ಮನೆ ಕೊಟ್ಟರೆ ಹುಳ ಬಿದ್ದು ಸಾಯುತ್ತೇವೆ‌. ಬಡವರ ಹಣ ಪಡೆದ್ರೆ ನಮ್ಮ ಮಕ್ಕಳಿಗೆ ಒಳ್ಳೆಯದಾಗುತ್ತಾ?. ಯಾರು ಹಣ ಪಡೆದಿದ್ದಾರೆ ಎಂದು ಪಾಟೀಲ್ ಹೇಳಲಿ. ಅವರ ಮೇಲೆ ಕ್ರಮ ತೆಗೆದುಕೊಳ್ಳೋಣ ಎಂದು ಸಚಿವರು ತಿಳಿಸಿದರು.

ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ಪ್ರತಿ ಮನೆಗೆ 1.50 ಲಕ್ಷ ರೂ. ಮಾತ್ರ ನೀಡುತ್ತೆ. ರಾಜ್ಯ ಸರ್ಕಾರ ಕೂಡ ಒಂದೂವರೆ ಲಕ್ಷ ಕೊಡುತ್ತದೆ. ಇದಕ್ಕೆ ಕೇಂದ್ರ ಸರ್ಕಾರ ಜಿಎಸ್​​ಟಿ ಹಾಕಿದೆ. ಜಿಎಸ್​ಟಿ ಬಿಡುವಂತೆ ಕೇಂದ್ರ ಸರ್ಕಾರಕ್ಕೆ ಕೇಳಿದ್ದೆವು. ಬಾಕಿ ಹಣ ಫಲಾನುಭವಿಗಳು ನೀಡಬೇಕು. ಆದ್ರೆ ಫಲಾನುಭವಿಗಳ ಹಣ ಸಮರ್ಪಕವಾಗಿ ಬಂದಿಲ್ಲ. ಹೀಗಾಗಿ ಮನೆಗಳು ಕಂಪ್ಲೀಟ್ ಆಗಿಲ್ಲ. ಸರ್ಕಾರವೇ ದುಡ್ಡು ಹಾಕಿ ಮನೆ ಕಂಪ್ಲೀಟ್ ಮಾಡಲಾಗುತ್ತಿದೆ. ಮುಂದಿನ ತಿಂಗಳು 42 ಸಾವಿರ ಮನೆಗನ್ನು ಕೋಡುತ್ತೇವೆ ಎಂದು ಸಚಿವ ಜಮೀರ್ ಹೇಳಿದರು.

- Advertisement - 

ಕಳೆದ 4 ವರ್ಷಗಳಿಂದ ಮನೆ ಕೊಟ್ಟಿರಲಿಲ್ಲ. ಈಗ 9 ಲಕ್ಷ ಮನೆಗಳ ನಿರ್ಮಾಣ ಆಗುತ್ತಿವೆ. ನಾನು ಈ ಬಗ್ಗೆ ಸಿಎಂ ಅವರ ಗಮನಕ್ಕೆ ತಂದೆ. ಬಜೆಟ್​​ನಲ್ಲಿ ಘೋಷಣೆ ಮಾಡಲು‌ ಮನವಿ ಮಾಡಿದ್ದೆ. ಸಿಎಂ ಅವರು ಕೂಡ ಒಪ್ಪಿದ್ರು. ಆದ್ರೆ ಆರ್ಥಿಕ ಇಲಾಖೆ ಬೇಡ ಅಂತ ಹೇಳಿತು. ಸದ್ಯ 9 ಲಕ್ಷ ಮನೆಗಳ ಕೆಲಸ ನಡೆಯುತ್ತಿದೆ. ಅವು ಮುಗಿಯುವವರೆಗೂ ಹೊಸ ಮನೆ ಘೋಷಣೆ ಮಾಡುವುದು ಬೇಡ ಎಂದುಕೊಂಡಿದ್ದೇವೆ ಎಂದು ತಿಳಿಸಿದರು.

ಬಿಜೆಪಿಯವರು ಸಿಬಿಐ ತನಿಖೆ ಮಾಡಿಸಿ ಹಣ ಪಡೆದಿರುವುದನ್ನು ಸಾಬೀತು ಮಾಡಲಿ. ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಅವರು ಸವಾಲ್ ಹಾಕಿದರು.

ವಸತಿ ಸಚಿವನಾಗಿ ನಾನು ಬಂದ ಮೇಲೆ ಮನೆ ಹಂಚಿಕೆ ಮಾಡುತ್ತಿದ್ದೇನೆ. ಇವತ್ತು ಬಿಜೆಪಿಗರು ಮಾತನಾಡುತ್ತಿದ್ದಾರೆ. ಬಡವರ ಮೇಲೆ ಬಿಜೆಪಿಗರಿಗೆ ಕಾಳಜಿ ಇಲ್ಲ. ಯಾರು ದುಡ್ಡು ಪಡೆದು ಮನೆ ಕೊಟ್ಟಿದ್ದಾರೆ ಅಂತ ಹೇಳಬೇಕು. ಈ ಬಗ್ಗೆ ತನಿಖೆಯಾಗಬೇಕು. ಸಿಎಂ ಅವರಿಗೆ ಪತ್ರ ಬರೆಯಲಿ. ಸಿಬಿಐ ತನಿಖೆಯಾಗಲಿ ಎಂದು ಸಚಿವ ಜಮೀರ್ ಒತ್ತಾಯಿಸಿದರು.

ಪಂಚಾಯತಿಯಲ್ಲಿ ನಡೆಯುವ ಭ್ರಷ್ಟಾಚಾರ ನಮಗೆ ಹೇಗೆ ಗೊತ್ತಾಗುತ್ತದೆ. ಯಾವ ಪಂಚಾಯತಿ ಅಂತ ಹೇಳಬೇಕು. ಅವರ ಕ್ಷೇತ್ರದ ಪಂಚಾಯತಿ ಬಗ್ಗೆ ಪಾಟೀಲ್ ಅವರೇ ಹೇಳಬೇಕು. ನಾನು ಸತ್ಯಹರಿಶ್ಚಂದ್ರ ಅಂತ ಹೇಳ್ತಿಲ್ಲ. ಈ ಬಡವರ ಮನೆ ವಿಚಾರವಾಗಿ ನಾನು ಹಣ ಪಡೆದ್ರೆ, ಮಕ್ಕಳಿಗೆ ಶಾಪ ತಟ್ಟಲಿ. ನಾನು ಈಗಾಗಲೇ ಇಲಾಖಾ ತನಿಖೆ ಮಾಡಿಸುತ್ತಿದ್ದೇನೆ ಎಂದು ಸಚಿವ ಜಮೀರ್ ಅಹ್ಮದ್ ತಿಳಿಸಿದರು.

 

Share This Article
error: Content is protected !!
";