ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚುನಾವಣಾ ಸೋಲುಗಳನ್ನು ಜೀರ್ಣಿಸಿಕೊಳ್ಳಲಾಗದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪದೇ ಪದೇ ಚುನಾವಣಾ ಆಯೋಗದ ವಿರುದ್ಧ ಅಕ್ರಮದ ಆರೋಪ ಮಾಡುತ್ತಲೇ ಬಂದಿದ್ದಾರೆ. ಚುನಾವಣಾ ಆಯೋಗ ಕೂಡಾ ರಾಹುಲ್ ಆರೋಪವನ್ನು ತಳ್ಳಿಹಾಕಿ ಕಾನೂನು ಮಾರ್ಗದಲ್ಲೇ ಚುನಾವಣೆ ನಡೆದಿದೆ ಎಂದು ಸ್ಪಷ್ಟನೆ ನೀಡಿದೆ ಎಂದು ಬಿಜೆಪಿ ತಿಳಿಸಿದೆ.
ನಿಜವಾಗಿಯೂ ಅಕ್ರಮ ನಡೆದಿರುವುದು ಕಾಂಗ್ರೆಸ್ ನಾಯಕತ್ವದಲ್ಲಿ. ನಕಲಿ ಗಾಂಧಿ ಕುಟುಂಬಕ್ಕೆ ಮಣೆ ಹಾಕಿದ್ದು, ಚುನಾವಣೆ ಎಂದರೇನು, ರಾಜಕೀಯ ಎಂದರೇನು ಎಂದರಿಯದ ಎಳಸುಗಳಿಗೆ ಕಾಂಗ್ರೆಸ್ ನಾಯಕತ್ವ ನೀಡಿದ್ದೇ ಚುನಾವಣಾ ಸೋಲುಗಳಿಗೆ ಕಾರಣ.
ಈಗ ಹಿರಿಯ ನಾಯಕರೊಬ್ಬರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ನೇಮಿಸಿ ಬೆದರುಬೊಂಬೆಯಾಗಿ ನಿಲ್ಲಿಸಿದ್ದಾರೆ .ಅಧಿಕಾರ ಎಲ್ಲವೂ ಈಗಲೂ ನಕಲಿ ಗಾಂಧಿಗಳ ಕೈಯಲ್ಲಿದೆ. ಹೀಗಾಗಿಯೇ ದೇಶದ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುತ್ತಿದ್ದಾರೆ.
ಸೋಲುಗಳಿಗೆ ಚುನಾವಣಾ ಆಯೋಗವನ್ನು ದೂರುವುದು ಬಿಟ್ಟು ದೇಶ ವಿರೋಧಿ ಚಿಂತನೆಗಳನ್ನು, ಉಗ್ರರನ್ನು ಬೆಂಬಲಿಸುವ ನೀತಿಗಳನ್ನು, ಅತಿಯಾದ ಮುಸಲ್ಮಾನರ ಓಲೈಕೆ ನೀತಿಗಳನ್ನು, ಹಿಂದೂ ವಿರೋಧಿ ನೀತಿಗಳನ್ನು ಭಾರತೀಯ ಕಾಂಗ್ರೆಸ್ ಪಕ್ಷ ತ್ಯಜಿಸಲಿ ಎಂದು ಬಿಜೆಪಿ ತಾಕೀತು ಮಾಡಿದೆ.

