ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ವಿಶೇಷ ಸೌಲಭ್ಯಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಡಿ ಸುಧಾಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ನಗರಸಭೆಯ 2021-22, 2022-23, 2023-24 ಹಾಗೂ 2024-25 ನೇ ಸಾಲಿನ ಎಸ್ಎಫ್ಸಿ ರಾಜ್ಯ ಹಣಕಾಸು ನಿಧಿ, ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಹಂತ-4) ಹಾಗೂ ನಗರಸಭೆ ನಿಧಿಯ 24.10% ರ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ, 7.25%ರ ಇತರೆ ಜನಾಂಗದವರ ಹಾಗೂ
5%ರ ವಿಶೇಷ ಚೇತನ ಯೋಜನೆಗಳಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಲಯಗಳಿಗೆ, ಹಿಂದುಳಿದ ವರ್ಗದ ವಿದ್ಯಾರ್ಥಿನಿಲಯಗಳಿಗೆ, ಪೀಠೋಪಕರಣಗಳು, ಗಣಕಯಂತ್ರಗಳು ವಿತರಣೆ, ವಿಕಲ ಚೇತನರಿಗೆ ಮೂರು ಚಕ್ರದ ಮೋಟಾರ್ ಸೈಕಲ್, ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ವಿಶೇಷ ಆರ್ಥಿಕ ನೆರವು, ಸಣ್ಣ ಉದ್ದಿಮೆದಾರರಿಗೆ ಆರ್ಥಿಕ ಸಹಾಯಧನ ವಿತರಣೆ ಕಾರ್ಯಕ್ರಮ ಹಾಗೂ ಘನತ್ಯಾಜ್ಯ ವಸ್ತುಗಳ ನಿರ್ವಹಣೆಗಾಗಿ ಸ್ವಚ್ಚಭಾರತ್ ಯೋಜನೆಯಡಿಯಲ್ಲಿ ಟಾಟಾ ಏಸ್ ಮಿನಿ ಟಿಪ್ಪರ್ ವಾಹನಗಳ ವಿತರಣೆಗೆ ಸಚಿವ ಸುಧಾಕರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ನಗರಸಭೆ ಅಧ್ಯಕ್ಷ ಜೆ.ಆರ್.ಅಜಯ್ ಕುಮಾರ್ (ಅಜ್ಜಪ್ಪ), ಉಪಾಧ್ಯಕ್ಷೆ ಹೆಚ್.ಮಂಜುಳ, ಸ್ಥಾಯಿ ಸಮಿತಿ ಅಧ್ಯಕ್ಷೆ ಎನ್.ಮಮತ, ಪೌರಾಯುಕ್ತ ಎ.ವಾಸೀಂ, ಸದಸ್ಯರುಗಳು ಸೇರಿದಂತೆ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಇದ್ದರು.

