ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮಾಯಸಂದ್ರ ಗ್ರಾಮ ದೇವತೆ ಕರಿಯಮ್ಮ ದೇವಸ್ಥಾನಕ್ಕೆ ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದ್ರಿ ರವರು ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಇದೇ ಸಂದರ್ಭದಲ್ಲಿ ಅವರು ಸಾರ್ವಜನಿಕರ ಹವಾಲುಗಳನ್ನು ಸ್ಪೀಕರಿಸಿದರು. ಮತ್ತು ಗ್ರಾಮದ ಮುಖಂಡರಿಂದ ನಾಗಲಕ್ಷ್ಮಿ ರವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದಭದಲ್ಲಿ ಇಂದಿರಾಗಾಂಧಿ ಅಭಿಮಾನಿಗಳ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಮಾಯಸಂದ್ರ ರಂಗಪ್ಪ ಯಾದವ್, ಗ್ರಾಮದ ಮುಖಂಡರಾದ ಕರೆಂಟ್ ಕರಿಯಪ್ಪ, ಮಂಜು, ಹನುಮಂತಪ್ಪ, ಪೂಜಣ್ಣ, ರಂಗಸ್ವಾಮಿ, ಗೌಡ್ರು ಕರಿಯಪ್ಪ, ಜಯಣ್ಣ, ಪ್ರಸಾದ್, ಶ್ರೀಧರ್, ಕಾಂತಪ್ಪ, ಕೀರ್ತಿ, ಇನ್ನೂ ಮುಂತಾದವರು ಇದ್ದರು.

