ಪಾಪರ್ ಸರ್ಕಾರ ಲಾಟರಿ ಸಿಎಂ ಸಿದ್ದರಾಮಯ್ಯ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಲಾಟರಿ ಮುಖ್ಯಮಂತ್ರಿ; ಪಾಪರ್ ಸರ್ಕಾರ ಲಾಟರಿ ಸಿಎಂ ಸಿದ್ದರಾಮಯ್ಯ ನವರೇ, ಹೈಕಮಾಂಡ್ ಏಜೆಂಟ್ ಸುರ್ಜೇವಾಲಾ ಅವರ ಬಳಿ ನಿಮ್ಮ ಶಾಸಕರು ಸಾಲು ಸಾಲು ದೂರುಗಳನ್ನು ಕೊಡುತ್ತಿದ್ದಾರೆ. ನಿಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತ ತೃಪ್ತಿ ತಂದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಎಲ್ಲ ಇಲಾಖೆಗಳಲ್ಲಿ ಲಂಚ, ಭ್ರಷ್ಟಾಚಾರ ನಡೆಯುತ್ತಿದೆ ಎಂದು ನಿಮ್ಮ ಸರ್ಕಾರದಲ್ಲಿ ನಡೆಯುತ್ತಿರುವ ಹಗಲು ದರೋಡೆಯನ್ನು ಬಯಲು ಮಾಡುತ್ತಿದ್ದಾರೆ. ಸಚಿವರು ಶಾಸಕರನ್ನು ಭೇಟಿ ಕೂಡ ಮಾಡುತ್ತಿಲ್ಲ ಎಂದು ಸಚಿವರ ಕಾರ್ಯವೈಖರಿ ಬಗ್ಗೆ ಕಂಪ್ಲೇಟ್ ಮಾಡಿದ್ದಾರೆ.

- Advertisement - 

ನಯಾ ಪೈಸೆ ಅನುದಾನವಿಲ್ಲದೆ ತಮ್ಮ ತಮ್ಮ ಕ್ಷೇತ್ರಗಳಿಗೆ ಹೋಗಲೂ ಮುಖ ಇಲ್ಲ ಎಂದು ಶಾಸಕರು ಅಸಹಾಯಕತೆ ಹಂಚಿಕೊಂಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಾಪ್ರಹಾರ ಮಾಡಿದರು.

ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು? ರಾಜೀನಾಮೆ ಕೊಟ್ಟು ತಮ್ಮ ಗೌರವ ಉಳಿಸಿಕೊಳ್ಳಿ. ಕರ್ನಾಟಕದ ಗೌರವವನ್ನೂ ಉಳಿಸಿ ಎಂದು ಅಶೋಕ್ ತಾಕೀತು ಮಾಡಿದರು.

- Advertisement - 

 

Share This Article
error: Content is protected !!
";